-->
ವಿದ್ಯುತ್ ಖಾಸಗೀಕರಣ ವಾಪಸ್ ತೆಗೆದುಕೊಳ್ಳುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ-Dharwad

ವಿದ್ಯುತ್ ಖಾಸಗೀಕರಣ ವಾಪಸ್ ತೆಗೆದುಕೊಳ್ಳುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ-Dharwad

ವಿದ್ಯುತ್ ಖಾಸಗೀಕರಣ ವಾಪಸ್ ತೆಗೆದುಕೊಳ್ಳುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ

ಭಾರತ ಸರ್ಕಾರವು ಜಾರಿಗೆ ತಂದಿರುವಂತಹ ಮೂರು ಕೃಷಿ ಕಾನೂನುಗಳ ಪೈಕಿ ವಿದ್ಯುಚ್ಛಕ್ತಿ
ಕಾಯ್ದೆಯೂ ಒಂದು. ಈ ವಿದ್ಯುಚ್ಛಕ್ತಿಯನ್ನು ಭಾರತ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಕೊಡುವಂತಹ
ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ದೇಶದ ಕೃಷಿ ವಲಯದ ಮೇಲಾಗುವ ದುಷ್ಪಪರಿನಾಮ ಖಚಿತವಾಗಿದೆ.
ಕೃಷಿಯು ಲಾಭದಾಯಕವಲ್ಲದ ಕಾರಣಕ್ಕೆ ಕೃಷಿಯಿಂದ ರೈತರನ್ನು ಹೊರಹಾಕಲು ವಿದ್ಯುಚ್ಛಕ್ತಿ, ರಸಗೊಬ್ಬರಗಳ
ದುಬಾರಿಗೊಳಿಸಿ ಬಿತ್ತನೆ ಬೀಜಗಳನ್ನು ರೈತನಿಂದ ಕೈ ತಪ್ಪಿಸಿ ಅದನ್ನೂ ದುಬಾರಿಗೊಳಿಸಲು ಸಜ್ಜಾಗಿದ್ದಾರೆ. ಇಂತಹ ರೈತ ವಿರೋಧಿ ನೀತಿಗಳನ್ನು ಕೈಗೊಂಡಿರುವ ಕಾರಣಕ್ಕೆ ಇದೇ ಸಂದರ್ಭದಲ್ಲಿ ವಿದ್ಯುಚ್ಛಕ್ತಿಯನ್ನು ಖಾಸಗೀಕರಣ ಮಾಡಲು ತೆಗೆದುಕೊಂಡಿರುವ ತೀರ್ಮಾನವು ರೈತರಿಗೆ ಮತ್ತು ಬಳಕೆದಾರ ಗ್ರಾಹಕರಿಗೆ ಅದರಲ್ಲೂ ಮಧ್ಯಮವರ್ಗ ಸಾಮಾನ್ಯ ವರ್ಗದ ಜನರಿಗೆ ಖಾಸಗಿ ಕಂಪನಿಗಳ ದುಬಾರಿ ದರ ನೀಡಲು ಅಸಾಧ್ಯವಾಗುತ್ತದೆ ಮತ್ತು ಮುಂಗಡವಾಗಿ ಹಣ ತುಂಬಿ ವಿದ್ಯುಚ್ಛಕ್ತಿಯನ್ನು ಬಳಕೆ ಮಾಡಬೇಕಾಗುತ್ತದೆ. ಉದಾಹರಣೆ ಪೋನ್‌ಗೆ ಕರೆನ್ಸಿ ಹಾಕಿದ ರೀತಿ, ರೈತರಿಗೆ ಕೃಷಿ ಮಾಡಲು ಸಾಧ್ಯವಾಗದ ರೀತಿಯಲ್ಲಿ ನೀತಿಯನ್ನು ರೂಪಿಸಲು ಮುಂದಾಗಿರುವ ಭಾರತ ಸರ್ಕಾರಕ್ಕೆ ನಾವು ತುರ್ತಾಗಿ ಒಂದು ಎಚ್ಚರಿಕೆಯನ್ನು ರವಾನೆ ಮಾಡುವ ಅವಶ್ಯಕತೆ ಇದೆ. ಇಡೀ ದೇಶದ ಉತ್ಪಾದನೆ ಮತ್ತು ವಿತರಣೆ ಎಲ್ಲತೆಗೆದುಕೊಳ್ಳಬೇಕೆಂದು ಕಂಪನಿಗಳ ಕೈಯಲ್ಲಿ ಇಡಲು ಭಾರತ ಸರ್ಕಾರ ಮುಂದಾಗಿದೆ.
ಇದು ಬ್ರಿಟಿಷರ ಈಸ್ಟ ಇಂಡಿಯಾ ಕಂಪನಿ ಸೃಷ್ಟಿಸಿದ ರೀತಿಯಲ್ಲಿ ನರೇಂದ್ರ ಮೋದಿಯವರು ಕಾರ್ಪೋರೇಟ್ ಕಂಪನಿಗಳ ಮೂಲಕ ದೇಶದ ಎಲ್ಲ ರಂಗವನ್ನು ಧಾರೆ ಎರೆಯಲು ಹೊರಟಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ,ಜನವಿರೋಧಿ ಸರ್ಕಾರವನ್ನು ಹದ್ದು ಬಸ್ತಿಗೆ ತರಲು ಜನರು ಬದಿಗಿಳಿಯುವ ಅವಶ್ಯಕತೆಯನ್ನು ಸರ್ಕಾರವೇ
ಸೃಷ್ಟಿಸುತ್ತದೆ ಸ್ವಾತಂತ್ರ್ಯದ ನಂತರ ಮತ್ತೊಂದು ಸ್ವಾತಂತ್ರ್ಯ ಚಳುವಳಿಯನ್ನು ಮಾಡುವ ಅನಿವಾರ್ಯತೆಯನ್ನು ನಾವು ಆಯ್ಕೆ ಮಾಡಿದಂತಹ ಸರ್ಕಾರಗಳೇ ಸೃಷ್ಟಿಸಿವೆ. ಈ ಮೂಲಕ ಪ್ರಜಾಪ್ರಭುತ್ವವನ್ನು ನಾಶಮಾಡಲು
ಹೊರಟಿದ್ದಾರೆ.
ಆದ್ದರಿಂದ ವಿದ್ಯುತ್ ಖಾಸಗೀಕರಣ ವಾಪಸ್ ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಕಲ್ಮೇಶ್ ಲಿಗಾಡಿ ರವರು ಒತ್ತಾಯಿಸಿದರು.

Reported By:
ರಘು ನರಗುಂದ
ಧಾರವಾಡ

1 Response to "ವಿದ್ಯುತ್ ಖಾಸಗೀಕರಣ ವಾಪಸ್ ತೆಗೆದುಕೊಳ್ಳುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ-Dharwad"

Article Top Ads

Central Ads Article 1

Middle Ads Article 2

Article Bottom Ads