-->
ಉದ್ಯೋಗಕ್ಕಾಗಿ ಪ್ರತಿಭಟಿಸಿದ ಯುವಜನರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾಕಾರರ ಬಿಡುಗಡೆಗೆ ಒತ್ತಾಯಿಸಿ ಎಐಡಿವೈಓ ಮನವಿ-Dharwad

ಉದ್ಯೋಗಕ್ಕಾಗಿ ಪ್ರತಿಭಟಿಸಿದ ಯುವಜನರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾಕಾರರ ಬಿಡುಗಡೆಗೆ ಒತ್ತಾಯಿಸಿ ಎಐಡಿವೈಓ ಮನವಿ-Dharwad

                           
ಉದ್ಯೋಗಕ್ಕಾಗಿ ಪ್ರತಿಭಟಿಸಿದ ಯುವಜನರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾಕಾರರ ಬಿಡುಗಡೆಗೆ ಒತ್ತಾಯಿಸಿ ಎಐಡಿವೈಓ ಮನವಿ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಉದ್ಯೋಗಕ್ಕಾಗಿ ಪ್ರತಿಭಟಿಸಿದ ಯುವಜನರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾ ನಿರತರ ಬಿಡುಗಡೆಗೆ ಒತ್ತಾಯಿಸಿ ಇಂದು ಧಾರವಾಡದಲ್ಲಿ ಎಐಡಿವೈಓ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮಧ್ಯಪ್ರದೇಶದಲ್ಲಿ, ನಿರುದ್ಯೋಗ ವಿರೋಧಿ ಹೋರಾಟ ಸಮಿತಿ ಮತ್ತು ಎಐಡಿವೈಒ ಸಂಘಟನೆಗಳು ಕಳೆದ ಹಲವು ವರ್ಷಗಳಿಂದ ಉದ್ಯೋಗಕ್ಕಾಗಿ ಚಳುವಳಿಯನ್ನು ಬೆಳೆಸುತ್ತಿವೆ. ಅದರ ಒಂದು ಭಾಗವಾಗಿ, ಭೋಪಾಲ್‌ನ ರೋಷನ್‌ಪುರ ಜಂಕ್ಷನ್‌ನಲ್ಲಿ ನಿನ್ನೆದಿನ ರಾಜ್ಯ ಮಟ್ಟದ ಪ್ರತಿಭಟನಾ ಪ್ರದರ್ಶನವನ್ನು ಸಂಘಟಿಸಲಾಗಿತ್ತು. ಪ್ರತಿಭಟನಾನಿರತರ ಮೇಲೆ ಅಲ್ಲಿನ ಪೊಲೀಸರು ಅನಾಗರಿಕವಾಗಿ ಕ್ರೂರ ಲಾಠಿ ಚಾರ್ಜ್ ಮಾಡಿದ್ದಾರೆ. ಎಐಡಿವೈಒನ ರಾಜ್ಯಾಧ್ಯಕ್ಷರಾದ ಲೋಕೇಶ್ ಶರ್ಮಾ ಮತ್ತು ಉಪಾಧ್ಯಕ್ಷರಾದ ವಿಜಯ್ ಶರ್ಮಾ ಮತ್ತು ನಿರುದ್ಯೋಗ ವಿರೋಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಶ್ರೀ ಪ್ರಮೋದ್ ನಾಮದೇವ್ ಅವರನ್ನು ಥಳಿಸಿ ಬಂಧಿಸಲಾಗಿದೆ. ಗೋಪಾಲ್ ಪ್ರಜಾಪತಿ, ದಿನೇಶ್ ಠಾಕೂರ್, ಪಾರುಲ್ ಶರ್ಮಾ, ಮನೋಜ್ ರಜಕ್, ಆರತಿ ಶರ್ಮಾ ಮತ್ತಿತರರನ್ನು ಬಂಧಿಸಿದ್ದಾರೆ. ಸಲೀಂ ಖಾನ್ ಸೇರಿದಂತೆ ನೂರಾರು ಯುವಕರು ಲಾಠಿಚಾರ್ಜ್ನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಯುವಕರು ಗಾಯಗೊಂಡಿದ್ದಾರೆ. ಬಂಧಿತರನ್ನು ದಿನವಿಡೀ ಅಲೆದಾಡಿಸಿ ನಗರದಿಂದ ೩೦-೪೦ ಕಿಲೋಮೀಟರ್ ದೂರಕ್ಕೆ ಕರೆದೊಯ್ಯಲಾಗಿದೆ. ಅನೇಕ ಬಂಧಿತ ಯುವಕರನ್ನು ಇಡೀ ದಿನ ಭೋಪಾಲ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೂರಿಸಲಾಗಿದೆ. ಅವರಲ್ಲಿ ಕೆಲವರ ಮೇಲೆ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಲಾಗಿದೆ. ಪೊಲೀಸರ ಈ ದೌರ್ಜನ್ಯವು ರಾಜ್ಯ ಮತ್ತು ದೇಶದ ಎಲ್ಲ ಯುವಕರಲ್ಲಿ ಸಾಕಷ್ಟು ಆಕ್ರೋಶವನ್ನುಂಟುಮಾಡಿದೆ.
ಮಧ್ಯಪ್ರದೇಶದಲ್ಲಿ ಕಳೆದ ೪ ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿಲ್ಲ. ಕೆಲವು ನೇಮಕಾತಿ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸಿದ ನಂತರವೂ ಅವರಿಗೆ ನೇಮಕಾತಿ ಆದೇಶವನ್ನು ನೀಡಿಲ್ಲ. ಅವರಲ್ಲಿ ಹಲವರು ಇನ್ನು ಕೆಲವೇ ದಿನಗಳಲ್ಲಿ ತಮ್ಮ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ನಿರುದ್ಯೋಗ ವಿರೋಧಿ ಹೋರಾಟ ಸಮಿತಿ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (AIDYO) ನೇತೃತ್ವದಲ್ಲಿ, ಇಡೀ ರಾಜ್ಯದ ಯುವಜನರು ನಿನ್ನೆ ಭೋಪಾಲ್‌ನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಪ್ರದರ್ಶನವನ್ನು ಸಂಘಟಿಸಿದ್ದರು. ಒಂದು ತಿಂಗಳ ಕಾಲ, ಭೋಪಾಲ್‌ನ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗೆ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿತ್ತು, ಆದರೆ ಅಲ್ಲಿನ ಆಡಳಿತವು ಪ್ರತಿಭಟನೆಗೆ ಎಲ್ಲಿಯೂ ಅನುಮತಿ ನೀಡಲಿಲ್ಲ. ಕೊನೆಗೆ ಪ್ರತಿಭಟನಾ ಮೆರವಣಿಗೆಗಾಗಿ ಯುವಕರು ಭೋಪಾಲ್‌ಗೆ ಬರಲು ನಿರ್ಧರಿಸಿದರು ಮತ್ತು ಭೋಪಾಲ್‌ನ ರೋಷನ್‌ಪುರ ಜಂಕ್ಷನ್‌ನಲ್ಲಿ ಜಮಾಯಿಸಿದರು. ಆದರೆ ಮುಂಜಾನೆಯಿಂದಲೇ, ಇಡೀ ಭೋಪಾಲ್‌ಗೆ ದಿಗ್ಬಂಧನ ಹಾಕುವುದಲ್ಲದೇ, ರೋಷನ್‌ಪುರ ಜಂಕ್ಷನ್‌ಅನ್ನು ಪೊಲೀಸ್ ಬಿಡಾರವನ್ನಾಗಿ ಪರಿವರ್ತಿಸಲಾಯಿತು. ಇದನ್ನು ಲೆಕ್ಕಿಸದೇ ಯುವಕರು ಅಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಮುಂದೆ ಮೆರವಣಿಗೆ ಸಾಗುತ್ತಿರುವಾಗ, ಪೊಲೀಸರು ಅವರ ಮೇಲೆ ಅನಾಗರಿಕವಾಗಿ ಲಾಠಿ ಪ್ರಹಾರ ನಡೆಸಿದರು.
ಆದ್ದರಿಂದ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಮತ್ತು AIDYO ಸಂಘಟನೆಯ ವತಿಯಿಂದ ಪೊಲೀಸರ ಈ ಹೇಯ ಕೃತ್ಯವನ್ನು ಉಗ್ರವಾಗಿ ಖಂಡಿಸಿ ಇಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಲಾಠಿ ಚಾರ್ಜ್ನಲ್ಲಿ ಗಾಯಗೊಂಡ, ನಿರುದ್ಯೋಗ ವಿರೋಧಿ ಹೋರಾಟ ಸಮಿತಿ ಮತ್ತು ಎಐಡಿವೈಒ ನ ಎಲ್ಲ ಯುವಕರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು ಮತ್ತು ಬಂಧಿತ ಯುವಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಮನವಿಪತ್ರದಲ್ಲಿ ಆಗ್ರಹಿಸಲಾಯಿತು. ಎಐಡಿವೈಓ ಜಿಲ್ಲಾಧ್ಯಕ್ಷರಾದ ಭವಾನಿಶಂಕರ್, ರಣಜಿತ್ ಧೂಪದ್, ಅಕ್ಷಯ ತಳಕಲ್, ಮಹಮದ್ ರಫಿ, ಮಂಜುನಾಥ, ನಿಂಗೇಶ ಮುಂತಾದವರಿದ್ದರು.

Reported By:
ರಘು ನರಗುಂದ

0 Response to "ಉದ್ಯೋಗಕ್ಕಾಗಿ ಪ್ರತಿಭಟಿಸಿದ ಯುವಜನರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾಕಾರರ ಬಿಡುಗಡೆಗೆ ಒತ್ತಾಯಿಸಿ ಎಐಡಿವೈಓ ಮನವಿ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads