
ವಿಧ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷರಾಗಿ ರಘು ನರಗುಂದ ನೇಮಕ: ಜೈ ಭೀಮ್ ಸಂಘರ್ಷ ಸಮಿತಿ ಧಾರವಾಡ-Dharwad
Sunday, August 8, 2021
2 Comments
ಜೈ ಭೀಮ ಸಂಘರ್ಷ ಸಮಿತಿ (ರಿ) ಧಾರವಾಡ ವತಿಯಿಂದ ಇಂದು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಧಾರವಾಡ ಜಿಲ್ಲೆಯ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ರಘು ನರಗುಂದ ರವರು ನೇಮಕಗೊಂಡರು.
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿರುವ ಜೈ ಭೀಮ ಸಂಘರ್ಷ ಸಮಿತಿ(ರಿ) ಧಾರವಾಡ ವತಿಯಿಂದ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತಾನಾಡಿದ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಬಸಂತಕುಮಾರ್ ಅನಂತಪುರ ರವರು, ಸಂಘಟನೆಯಿಂದ ಹಲವಾರು ಸೇವಾ ಕಾರ್ಯಕ್ರಮಗಳು ಈಗಾಗಲೇ ನಡಿಯುತ್ತಾ ಬಂದಿದೆ ಮತ್ತು ಸಂಘಟನೆಯ ಎಲ್ಲಾ ಸದಸ್ಯರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಬಾ ಸಾಹೇಬರ ತತ್ವಗಳನ್ನು ಎಲ್ಲಾರೂ ಪಾಲಿಸಬೇಕು, ನಮ್ಮ ಸಂಘಟನೆಯಲ್ಲಿ ಯಾವುದೇ ಜಾತಿ ಭೇದ ಭಾವ ಇಲ್ಲ, ನಾವು ನಮ್ಮ ಹಕ್ಕುಗಳಿಗೆ ಹೋರಾಟ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಕುಮಾರ್ ರವರು ಮಾತಾನಾಡಿ ಜಿಲ್ಲೆಯ ವಿದ್ಯಾರ್ಥಿಗಳಿಗಿರುವ ಸಮಸ್ಯೆ ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ನೀಡಿ ,ಇದಕ್ಕೆ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಹಾಗೂ ಹಕ್ಕುಗಳಿಗಾಗಿ ಹೋರಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ನಾಗರಾಜ್ ಜಾಲಿಗಿಡದ ರವರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ ಪುರಸ್ಕಾರ-2021 ಯೋಜನೆಯ ರಿಜಿಸ್ಟರ್ ಪತ್ರಿಕೆ ಹಂಚಿಕೆಯಾಯಿತು. ಉತ್ತರ ಕರ್ನಾಟಕದಲ್ಲಿ ಇರುವ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪುರಸ್ಕಾರ ಮಾಡವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಸಂಘಟನೆಯು ತಂದಿದೆ, ಹಾಗೂ ಅನ್ಲೈನ್ ಅರ್ಜಿಗೆ ಆಹ್ವಾನ ಮಾಡಲಾಗಿದೆ.
(Google Register Form ಲಿಂಕ್ ಅನ್ನು ಕೆಳಗಡೆ ಕೊಡಲಾಗಿದೆ.)
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ನಾಗರಾಜ್ ಜಾಲಿಗಿಡದ, ಕೋರ್ ಕಮಿಟಿಯ ಅಧ್ಯಕ್ಷರಾದ ಬಸವರಾಜ್ ಕಬ್ಬಡಿ, ರಾಜ್ಯ ಯುವ ಘಟಕದ ಅಧ್ಯಕ್ಷರು, ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಜೈ ಭೀಮ ಸಂಘರ್ಷ ಸಮಿತಿ (ರಿ) ಮತ್ತು ಪ್ರತೀಕ್ಷಾ ಸೇವಾ ಸಂಸ್ಥೆಯ ಆಶ್ರಯದಲ್ಲಿ
*ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ-ಪುರಸ್ಕಾರ-2021*
ಆನ್ಲೈನ್ ಅರ್ಜಿಗೆ ಆಹ್ವಾನ :
ಉತ್ತರ ಕರ್ನಾಟಕದ ಭಾಗದಲ್ಲಿ ಕೃಷಿ, ಸಂಘಟನೆ, ಹೋರಾಟ, ರೈತ ಪರ, ಶಿಕ್ಷಣ ಕ್ಷೇತ್ರ, ಕ್ರೀಡೆ, ವೈದ್ಯಕೀಯ,ಕಲೆ, ಪತ್ರಿಕಾ-ಮಾಧ್ಯಮ ಕ್ಷೇತ್ರ, ಸಂಸ್ಥೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ತಮ್ಮ ಮಾಹಿತಿಯನ್ನು ಈ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ನಮೂದಿಸಿ.
(ಕೊನೆಯ ದಿನಾಂಕ-20/08/2021)
Reported By:
ರಘುವೀರ್ ಸಿದ್ದಿ
ಧಾರವಾಡ
🙏🇪🇺ಜೈ ಭೀಮ್🇪🇺🙏
ReplyDelete🙏🇪🇺✊💪✊🇪🇺🙏
ಜೈ ಭೀಮ ಜೈ ಸಂವಿಧಾನ 🙏🙏🙏🙏🙏
ReplyDeleteಸಂಘಟನೆಯ ಸೇರುವ ಮೂಲಕ ಜಾಗೃತರಾಗಿ ಹಾಗೂ ಸಮುದಾಯದ ಜನರನ್ನು ಜಾಗೃತಗೊಳಿಸಿ ವಂದನೆಗಳು 🙏🙏🙏🙏💐🙏🇪🇺ಜೈ ಭೀಮ್🇪🇺🙏💐