
ಚಿಗರಿ ಬಸ್ ಬೇಲೂರ ಕೈಗಾರಿಕಾ ಪ್ರದೇಶಕ್ಕೆ ವಿಸ್ತರಣೆ-BRTS Bus Dharwad
Thursday, August 12, 2021
Comment
ಚಿಗರಿ ಬಸ್ ಬೇಲೂರ ಕೈಗಾರಿಕಾ ಪ್ರದೇಶಕ್ಕೆ ವಿಸ್ತರಣೆಯಾಗಲಿ
ಹುಬ್ಬಳ್ಳಿ: ಬಿ.ಆರ್.ಟಿ.ಎಸ್.ಆರಂಭವಾಗಿ ಮೂರು ವರ್ಷವಾದರೂ ವಿಶ್ವ ಬ್ಯಾಂಕಿನಿಂದ ಸಾಲ ತೆಗೆದುಕೊಂಡ ಒಟ್ಟು ೯೭೦ಕೋಟಿ ರೂ,ನ ೭೦ ಕೀ.ಮೀ.ಓಡಾಡಬಹುದಾದ ಸಾರಿಗೆಯಲ್ಲಿ ಕೇವಲ ೨೨ ಕೀ.ಮೀ ವ್ಯಾಪ್ತಿಯಲ್ಲಿ ೧೦೦ ಬಸ್ ಗಳು ಮಾತ್ರ ಸಂಚರಿಸುತ್ತಿವೆ ಎಂದು ಸಮಾಜ ಸೇವಕ ಕನಕರಾಯ ಪೂಜಾರ ಹೇಳಿದ್ದಾರೆ.
ಹುಬ್ಬಳ್ಳಿಯಿಂದ ಧಾರವಾಡ ಕೃಷಿ ವಿಶ್ವ ವಿದ್ಯಾಲಯ,ಹೈಕೋರ್ಟ್ ಮೂಲಕ ಬೇಲೂರ ಕೈಗಾರಿಕಾ ಪ್ರದೇಶಗಳಿಗೆ ತೆರಳಬೇಕಿದ್ದ ಈ ಸೌಲಭ್ಯ ಇವರೆಗೂ ಮರಿಚಿಕೆಯಾಗಿಯೇ ಉಳದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಬಹು ನಿರೀಕ್ಷಿತ ಈ ಸಾರಿಗೆ ವ್ಯವಸ್ಥೆಯು ಪ್ರಾರಂಭವಾಗಿ ೩ವರ್ಷ ಗತಿಸಿದರೂ ತೆಗೆದುಕೊಂಡ ಸಾಲದ ಬಡ್ಡಿಗೆ ಹೊರೆಯಾಗಿದೆ. ಈ ವ್ಯವಸ್ಥೆ ಅನುಷ್ಠಾನಗೊಂಡಿದ್ದರೆ ಸರಿ,ಸುಮಾರು ೨೦ ಗ್ರಾಮಗಳಿಗೆ ಸಾರಿಗೆ ಪ್ರಯಾಣ ಅನುಕೂಲವಾಗುತ್ತಿತ್ತು.
ಗ್ರಾಮೀಣಾಭಿವೃದ್ಧಿಯ ಕನಸೂ ಸಹ ಇದರಿಂದ ನನಸಾಗುತ್ತಿತ್ತು ಎಂದು ತಿಳಿಸಿದ್ದಾರೆ. ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಈ ಉಪಯುಕ್ತ ಬಿ.ಆರ್.ಟಿ.ಎಸ್. ಯೋಜನೆಯ ಸಫಲತೆ ಆರಂಭದ ವೇಗಕ್ಕೆ ಕಡಿವಾಣ ಬಿದ್ದಂತಾಗಿದೆ. ಅಚ್ಚರಿ ಎಂದರೆ ಭಾರತ ಸರಕಾರದ ಮಿನಿಸ್ಟ್ರೀ ಆಪ್ ಹೌಸಿಂಗ್, ಅರ್ಬನ್ ಅಪೇರ್ಸ್ ನವರು ಬೆಸ್ಟ್ ಅರ್ಬನ್ ಮಾಸ್ ಟ್ರಾನ್ಸಿಸ್ಟ ಪ್ರೊಜೆಕ್ಟ್ ಆವಾರ್ಡ್ ಆಪ್ ಎಕ್ಷಲೆನ್ಷಿ ಅವಾರ್ಡ್ ನೀಡಿದೆ. ೭೯ ಕೀ.ಮೀ.ಕ್ರಮಿಸುವ ಈ ಯೋಜನೆ ಇದೀಗ ಬರೀ ೨೨ ಕೀ.ಮೀ.ಮಾತ್ರ ಸಪಲತೆ ಕಂಡಿದ್ದು, ಇಷ್ಟು ಗಾತ್ರದ ಯೋಜನೆಯ ಹಣವನ್ನು ಇದಿಷ್ಟಕ್ಕೆ ಮಾತ್ರ ವಿಬಿಯೋಗಿಸಿದ್ದು ಸರೀನಾ ಎಂದು ಪ್ರಶ್ನಿಸಿದ್ದಾರಲ್ಲದೇ ಇದಕ್ಕೆ ಸಂಭದಿಸಿದವರೇ ಉತ್ತರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಈ ಮಾರ್ಗದಲ್ಲಿ ಬರುವ ನವಲೂರ ಬಳಿಯ ಸೇತುವೆ ಇದೇ ಯೋಜನಾ ಹಣದಿಂದ ನಿರ್ಮಾಣವಾಗಿದ್ದು ಅದೀಗ ಕುಸಿದು ಹೋಗಿದೆ.ಸದ್ಯ ಇದು ಅಪಾಯದ ಅಂಚಿನಲ್ಲಿಯೇ ಇದ್ದು ಹುಬ್ಬಳ್ಳಿ ರೇಲ್ವೇ ನಿಲ್ದಾಣದಿಂದ ಧಾರವಾಡ ತದನಂತರ ಹೈಕೋರ್ಟ್ ಮೂಲಕ ಬೇಲೂರು,ಕೋಟೂರ ಇಂಡಸ್ಟ್ರೀಸ್ ಪ್ರದೇಶಕ್ಕೆ ಪ್ರತಿ ಅರ್ದ ಗಂಟೆಗೆ ಒಂದು ಚಿಗರಿ ಸಾರಿಗೆ ಓಡಾಡಬೇಕಿದೆ. ಇದರಿಂದ ಆರ್ಥಿಕ ಪುನಶ್ಚೇತ ಪಡೆದು ಲಕ್ಷಾಂತರ ಜನರ ಸಾರಿಗೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಸರಕಾರ ಪ್ರಾಯೋಜಿತ ಅನುದಾನ ಕಾನೂನು ರೀತಿ ಸದ್ಬಳಕೆಯಾಗಬೇಕಿದೆ ಎಂದು ಪೂಜಾರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Reported By:
ರಘು ನರಗುಂದ
ಧಾರವಾಡ
0 Response to "ಚಿಗರಿ ಬಸ್ ಬೇಲೂರ ಕೈಗಾರಿಕಾ ಪ್ರದೇಶಕ್ಕೆ ವಿಸ್ತರಣೆ-BRTS Bus Dharwad"
Post a Comment