
ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ:ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಂಭುಗೌಡ ರುದ್ರಗೌಡ ಸಾಲಿಮನಿ
Sunday, August 29, 2021
Comment
ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ :ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಂಭುಗೌಡ ರುದ್ರಗೌಡ ಸಾಲಿಮನಿ
ದಿನಾಂಕ : 3-9-2021 ರಂದು ಜರುಗುವ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ವಾರ್ಡ ನಂ. 14ರ ಸಮಸ್ತ ಗುರು-ಹಿರಿಯರ ಒತ್ತಾಸೆಯ ಮೇರೆಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.
14ನೇ ವಾರ್ಡಿನ' ಸರ್ವ ಕೆಲಸಗಳನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಲು ನಾನು ಶ್ರಮಿಸುತ್ತೇನೆ : ಶ್ರೀ ಶಂಭುಗೌಡ ರುದ್ರಗೌಡ ಸಾಲಿಮನಿ
ಹು-ಧಾ ಮಹಾನಗರ ಪಾಲಿಕೆ ಚುನಾವಣೆ ವಾರ್ಡ್ ನಂ 14ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ: ಶ್ರೀ ಶಂಭುಗೌಡ ರುದ್ರಗೌಡ ಸಾಲಿಮನಿ
"ನನಗೆ ಈ ಬಾರಿ ನಿಮ್ಮ ಆಶೀರ್ವಾದ ಇರಬೇಕು ಮತ್ತು ಈ ಮೊದಲು ಅನೇಕ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಟ್ಟು ಸ್ಪಂದಿಸಿದ್ದೇನೆ. ಆರಿಸಿ ತಂದು ತಮ್ಮೆಲ್ಲರ ಸ್ನೇಹ ಸಹಕಾರದಿಂದ ನಮ್ಮ '14ನೇ ವಾರ್ಡಿನ' ಸರ್ವ ಕೆಲಸಗಳನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಲು ನಾನು ಶ್ರಮಿಸುತ್ತೇನೆ. ಕಾರಣ ಮಾನ್ಯ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಬೇಕೆಂದು ಮತ್ತು ನನ್ನನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದು ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ" ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
14ನೇ ವಾರ್ಡಿನಲ್ಲಿ ಮುಂದೆ ಇವರು ಮಾಡುವ ಕೆಲಸಗಳು
1) ಸರ್ಕಾರದ ಅನುದಾನದಡಿ ಫಲಾನುಭವಿಗಳಿಗೆ ಆಶ್ರಯ ಮನೆಗಳ ನಿರ್ಮಾಣ.
2) ಬಡವರಿಗಾಗಿ ಬಿಪಿಎಲ್ (BPL) ರೇಷನ್ ಕಾರ್ಡಗಳನ್ನು ಮಾಡಿಸಿ ಕೊಡುವುದು.
3) ಆಪತ್ಕಾಲದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ 24X7 ಸಹಾಯ ಹಸ್ತ.
4) ನಮ್ಮ ವಾರ್ಡಿನಲ್ಲಿ ಸ್ವಚ್ಛತೆಗೆ ಆದ್ಯತೆ.
5) ಹೊಸ ಬಡಾವಣೆಯಲ್ಲಿ 24x7 ಕುಡಿಯುವ ನೀರಿನ ಸರಬರಾಜು ನನ್ನ ಮೊದಲ ಆದ್ಯತೆ.
Reported By:
Raghu Naragunda
0 Response to "ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ:ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಂಭುಗೌಡ ರುದ್ರಗೌಡ ಸಾಲಿಮನಿ"
Post a Comment