
ಧಾನಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ:ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು-Bandigani
Friday, August 20, 2021
Comment
ಬಂಡಿಗಣಿ 20:ಸುಳ್ಳು ತುಡುಗ ಬಿಟ್ಟು ಅಖಂಡ ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದರೆ ಆತ್ಮಜ್ಞಾನಿಗಳಾಗಿ ಹುಟ್ಟು ಸಾವುಗಳಿಂದ ಬಿಡುಗಡೆಯಾಗಲು ಸಾಧ್ಯ. ಮಾನವ ಹೋಗಿ ದೇವಮಾನವರಾಗಬೇಕಾಗಿದೆ. ಧಾನಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.
ಅವರು ಬೆಳಗಲಿ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ನಡೆದ ದೇವಿಯ ನೈವೇದ್ಯ ಹಾಗೂ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಮಾಧವಾನಂದರಂಥ ಮಹಾತ್ಮರು ಭೂಮಿಯ ಮೇಲೆ ಅವತರಿಸಿ ಬಂದಾಗ ಇದ್ದಾಗಲೇ ತಿಳಿದುಕೊಂಡು ಮಾನವ ಜನ್ಮ ಉದ್ದಾರಮಾಡಿಕೊಳ್ಳಬೇಕು.ನಡೆ ನುಡಿಗಳು ಒಳ್ಳೇದಾಗಿರಬೇಕು. ವ್ಯಸನಕ್ಕೆ ಬಲಿಯಾಗಿ ಶ್ರೇಷ್ಠವಾದ ಮಾನವ ಜೀವನ ಹಾಳು ಮಾಡಿಕೊಳ್ಳದೆ ವ್ಯಸನದಿಂದ ಮುಕ್ತವಾಗಿ ಹಾಲಿನ ಮಕ್ಕಳಾಗಿರಬೇಕು. ನ್ಯಾಯವನ್ನು ಕೋರ್ಟು ಕಚೇರಿಗೆ ಹೋಗಿ ಹಣ ಖರ್ಚು ಮಾಡದೆ ಗ್ರಾಮದಲ್ಲಿಯೇ ಸತ್ಯ ಧರ್ಮದಿಂದ ಹಿರಿತನ ಮಾಡುವ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಿರಿ. ಹಣದ ಆಸೆಗಾಗಿ ಹೀನ ಕೃತ್ಯ ಮಾಡದೆ ಬೇರೆಯವರ ಮಾತು ಕೇಳಿ ಸುಳ್ಳು ಅಪವಾದ ಹೊರಸಿ ಕಷ್ಟಕ್ಕೆ ಸಿಲುಕಿಸಬೇಡಿರಿ.ದೇವರ ಹೇಳೋರನ್ನ, ಮಂತ್ರವಾದಿಗಳನ್ನು ನಂಬದೆ ದೇವರನ್ನು ಪೂರ್ಣವಾಗಿ ನಂಬಿದರೆ ಒಳ್ಳೆಯದಾಗುತ್ತದೆ. ನಂಬಿಗೆಯಲ್ಲಿ ದೇವರಿದ್ದಾನೆ. ಜಾತಿ ಭೇದಮಾಡದೆ ಎಲ್ಲರೂ ಒಂದೇ ಎಂದು ತಿಳಿದು ನಡೆದರೆ ದೇಶ ರಾಮರಾಜ್ಯವಾಗುವದೆಂದು ಹೇಳಿದರು.
ಧರೆಪ್ಪ ಸಾಂಗ್ಲಿಕರ ಮಾತನಾಡಿ ನಾಡಿನಾದ್ಯಂತ ಸಂಚರಿಸಿ ಭಕ್ತ ಸಮೂಹ ಕರೆದುಕೊಂಡು ದಾಸೋಹ, ಸಪ್ತಾಹ ನಡೆಸಿ ಧರ್ಮ ಬೆಳೆಸಿ ಜಗತ್ತು ಉದ್ದಾರ ಮಾಡುವ ಕಾರ್ಯವನ್ನು ದಾನೇಶ್ವರ ಪೂಜ್ಯರು ಮಾಡುತ್ತಿದ್ದಾರೆ. ಊಟ ಮಾಡಿದ ಪಾತ್ರೆಯನ್ನು ಭಕ್ತರು ಕೈಯಲ್ಲಿ ತೆಗೆದುಕೊಂಡು ಸ್ವ ಮನಸ್ಸಿನಿಂದ ಸೇವೆ ಮಾಡುತ್ತಿರುವ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು. ಮೀನಾಕ್ಷಿ ನೆಲಗಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕರು ಮಾತನಾಡಿ ಹಸಿದ ಹೊಟ್ಟೆಗೆ ಊಟವನ್ನು ನೀಡುವ ಏಕೈಕ ಬಂಡಿಗಣಿ ಮಠವೆಂದು ಹೇಳಿದರು.
ಬೆಳಗಲಿ ಗ್ರಾಮಸ್ಥರಿಂದ ಚಕ್ರವರ್ತಿ ದಾನೇಶ್ವರ ಶ್ರೀಗಳಿಗೆ ವಿಶೇಷ ಅಲಂಕಾರ ನಡೆಯಿತು.ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು. ರಾಮಪ್ಪ ಪೂಜೇರಿ ಮಹಾಲಕ್ಷ್ಮೀ ದೇವಿಯ ಅರ್ಚಕರು.ಕಾಡಯ್ಯ್ ಗಣಾಚಾರಿ. ಮಲ್ಲಪ್ಪ ಹೊಸಪೇಟಿ.ಅಲ್ಲಪ್ಪ ಸಂಕರಟ್ಟಿ. ಮಾಯವ್ವ ಪೂಜೇರಿ. ಮೋಹನ ಕುಲಕರ್ಣಿ. ಕರೆಪ್ಪ ದಡ್ಡಿಮನಿ. ಮಾರುತಿ ದೊಡಮನಿ. ಭುಜಬುಲಿ ಎಬರಟ್ಟಿ ಸೇರಿದಂತೆ ಅನೇಕರಿದ್ದರು.
ವರದಿ:
ವಿ.ಜಿ.ವೃಷಭೇಂದ್ರ
0 Response to "ಧಾನಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ:ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು-Bandigani"
Post a Comment