-->
ಧಾರವಾಡದ ಆಟೋ ಚಾಲಕರಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ-Auto Drivers

ಧಾರವಾಡದ ಆಟೋ ಚಾಲಕರಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ-Auto Drivers

ಧಾರವಾಡ::

 ಎಂ.ಎಂ. ಚೌಧರಿ, ವಕೀಲರು ಹಾಗೂ ಅಧ್ಯಕ್ಷರು, ಧಾರವಾಡ ನಗರ ಆಟೋ ಚಾಲಕರ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘ ಈ ಮೂಲಕ ಈ ದೂರಿನೊಂದಿಗೆ ಲಗತ್ತಿಸಿದ ಆಟೋ ಚಾಲಕರ ಪರವಾಗಿ ಇಲ್ಲಿ ಈ ಕೆಳಗೆ ನಮೂದಿಸಿದ ಗೌಳಿ ಜನಾಂಗದ ಮಾಳಮಡ್ಡಿಯ ನಿವಾಸಿಗಳಾದ ಆಟೋ ಚಾಲಕರಾದ (1) ಸುನೀಲ್ (2)ಪ್ರಕಾಶ (3) ದಾಸ (4) ಮಿನ್ನಿ (5) ಎಡ್‌ಲೈಟ್ (6) ಬಾಷಾ (7) ರಾಜು ಪಿ (8) ಲಿಂಬುರಾಜು (9) ಜಾನು (10)ಮನ್ಯಾ (11) ಅಮ್ಮು (12) ಚಾಮುಂಡ್ಯ (13) ಟಮಾಟಾ (14) ಮೌಲಾ ಇವರ ವಿರುದ್ಧ ನೀಡುತ್ತಿರುವ ದೂರುಏನೆಂದರೆ :ಈ ಕೆಳಗೆ ಈ ದೂರಿನೊಂದಿಗೆ ಲಗತ್ತಿಸಲಾದ ಪ್ರತಿಯಲ್ಲಿ ಸಹಿ ಮಾಡಿದ ರೇಲ್ವೆ ಸ್ಟೇಶನ್ ಆಟೋ ಸ್ಟ್ಯಾಂಡ್ಆಟೋ ಚಾಲಕರು ಈಗ್ಗೆ 50 ವರ್ಷಗಳಿಂದಲೂ ಆಟೋ ಚಲಾಯಿಸುತ್ತ ತಮ್ಮ ಉಪಜೀವನ ನಡೆಸುತ್ತಾ ಬಂದಿರುವಂಥವರಾಗಿದ್ದು, ಇವರೆಲ್ಲರೂ ನಮ್ಮ ಧಾರವಾಡ ನಗರ ಆಟೋ ಚಾಲಕರ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇರುತ್ತಾರೆ. ಎಲ್ಲ ಆಟೋ ಚಾಲಕರು ಬಡತನದಲ್ಲಿ ಇರುವವರಿದ್ದು, ಅವರಿಗೆ ಆಟೋ ಚಲಾಯಿಸುವುದೊಂದೇ ಉಪಜೀವನದ ಮಾರ್ಗವಾಗಿರುತ್ತದೆ.
ಇತ್ತೀಚೆಗೆ 2-3 ವರ್ಷಗಳಿಂದ ಈ ಆಟೋ ಸ್ಟ್ಯಾಂಡಿಗೆ ಮೇಲ್ಕಾಣಿಸಿದ ಗೌಳಿ ಜನಾಂಗದ ಕೆಲವು ಜನರು
ಗೈರ ಕಾಯ್ದೆಶೀರ ಟೋಳಿ ಕಟ್ಟಿಕೊಂಡು ಆಟೋ ತಂದು ನಿಲ್ಲಿಸಿ, ಈ ಎಲ್ಲ ಆಟೋ ಚಾಲಕರ ಹಾಗೂ
ಸಾರ್ವಜನಿಕರಿಗೆ ಶಾಂತಿ ಭಂಗವುಂಟು ಮಾಡುತ್ತಿದ್ದಾರೆ. ಮೊದಲಿಗೆ ನಮ್ಮ ಆಟೋ ಚಾಲಕರು ಪಾಳೆಯ ಪ್ರಕಾರ
ಸೂಕ್ಷ್ಮವಾಗಿ ಪ್ಯಾಸೆಂಜರ್ ರನ್ನು ಹತ್ತಿಸಿಕೊಂಡು ಹೋಗುವುದು ಈ ಆಟೋ ಸ್ಟ್ಯಾಂಡ್ ನವರು ಇಟ್ಟುಕೊಂಡ
ವಾಡಿಕೆ. ಆದರೆ ಸದರಿ ಗೌಳಿ ಜನಾಂಗದ ಆಟೋ ಚಾಲಕರು ಈ ಕೆಳಗೆ ಸಹಿ ಮಾಡಿದ ದೂರುದಾರ ಆಟೋ ಚಾಲಕರ ಮೇಲೆ ದಬ್ಬಾಳಿಕೆ ಮಾಡುವುದು, ಚಿನಾಲಿಕೆ, ಬೋಸಡೀಕೆ ಅಂತೆಲ್ಲಾ ಮುಂತಾಗಿ ಅವಾಚ್ಯ ಶಬ್ದಗಳಿಂದ ಬೈಗುಳಗಳನ್ನು ಬೈಯ್ಯುವುದು, ಜೀವದ ಧಮಕಿ ಕೊಡುವುದು, ಹೀಗೆ ಮಾಡುತ್ತಾ ತಮ್ಮ ಸರ್ವಾಧಿಕಾರ ತೋರುತ್ತಾ ಈ ಆಟೋ ಚಾಲಕರಿಗೆ ದುಡಿಯುವ ಆಸ್ಪದ ಕೊಡುತ್ತಿಲ್ಲ. ಅಲ್ಲದೇ ಟ್ರೇನ್ ಬಂದ ತಕ್ಷಣವೇ ಸ್ಟೇಶನ್ ಒಳಗಡೆ
ಪ್ಲಾಟ್‌ಫಾರಂ ಮೇಲೆ ಹೋಗಿ ಪ್ಯಾಸೆಂಜರ್‌ಗಳಿಂದ ಬ್ಯಾಗ್‌ಗಳನ್ನು ಜಬರಿ ಮಾಡಿ ಕಸಿದುಕೊಂಡು ತಮ್ಮ
ಆಟೋದಲ್ಲೇ ಕರೆದುಕೊಂಡು ಹೋಗುತ್ತಾರೆ. ಅಲ್ಲದೇ ಮುಗ್ಧ ಬೇರೆ ಊರಿನಿಂದ ಬಂದ ಪ್ಯಾಸೆಂಜರ್‌ಗಳಿಂದ ಹೆಚ್ಚು ಆಟೋ ಶುಲ್ಕ ಪಡೆದು ಹೆಚ್ಚಿಗೆ ದುಡ್ಡು ವಸೂಲಿ ಮಾಡುತ್ತಾ ಬಂದಿದ್ದಾರೆ.
ಈ ರೀತಿ ಹಿಂದೊಮ್ಮೆ ಸುಮಾರು 5-6 ತಿಂಗಳ ಹಿಂದೆ ಇದೇ ರೀತಿ ಆದಾಗ, ಶ್ರೀಯುತ ರವಿ ಚನ್ನಣ್ಣವರ
ಈ ವಿಷಯವನ್ನು ತಂದಾಗ ಸದರಿಯವರು ಆಟೋ ಸ್ಪಾಂಡಿಗೆ ಭೇಟಿ ನೀಡಿ, ಎಲ್ಲರೂ
ಇವರ ಬಳಿ ಹೋಗುತ್ತಾ ಹೊಂದಾಣಿಕೆಯಿಂದ ಪಾಳೆಯ ಬಂದ ಪ್ರಕಾರ ಆಟೋದಲ್ಲಿ ಪ್ಯಾಸೆಂಜರ್‌ರನ್ನು ಹತ್ತಿಸಿಕೊಂಡು
ಸೌಹಾರ್ದತೆಯಿಂದ ಇರುವಂತೆ ಸಲಹೆ ನೀಡಿದ್ದರು. ಅದೇ ಪ್ರಕಾರ ನಾವು ಇಷ್ಟು ದಿನಗಳವರೆಗೆ ಇದೇ ರೀತಿ ನಮ್ಮ ಚಾಲಕರು ಸಂಭಾಳಿಸಿಕೊಂಡು ಹೋಗುತ್ತ ಬಂದಿರುತ್ತಾರೆ.

ಈ ಗೌಳಿ ಜನಾಂಗದ ಆಟೋ ಚಾಲಕರು ದಿನಾಲು 5-00 ಗಂಟೆಗೆ ಆಟೋ ಸ್ಟ್ಯಾಂಡಿಗೆ ಬರುತ್ತಾರೆ,
ಎಂದಿನಂತೆ ಇವತ್ತು ಅಂದರೆ ದಿನಾಂಕ 21.12.2018 ರಂದು ಕೂಡಾ ಬೆಳಿಗ್ಗೆ ಬೇಗನೆ ಆಟೋ ಸ್ಟ್ಯಾಂಡಿಗೆ ಬಂದು ನಮ್ಮ ಆಟೋ ಚಾಲಕರ ಮೇಲೆ ದಬ್ಬಾಳಿಕೆ ಮಾಡಲು ಪ್ರಾರಂಭಿಸಿದರು. ಇವತ್ತು ಕೂಡಾ ಬೆಳಿಗ್ಗೆ ಟ್ರೇನ್ ತಕ್ಷಣವೇ ಟೋಳಿ ಕಟ್ಟಿಕೊಂಡು ರೈಲ್ವೇ ಸ್ಟೇಶನ್ ಒಳಗೆ ನುಗ್ಗಿ ಪ್ಯಾಸೆಂಜರ್‌ರ ಕೈಯಿಂದ ಬ್ಯಾಗ್, ಲಗೇಜುಗಳನ್ನು ಎಳೆದುಕೊಂಡು ಬಂದು ತಮ್ಮ ತಮ್ಮ ಆಟೋಗಳಲ್ಲಿ ಹತ್ತಿಸಿಕೊಳ್ಳಹತ್ತಿದರು. ಅದಕ್ಕೆ ನಮ್ಮ ಆಟೋ ಚಾಲಕರು ಎಲ್ಲರೂ
ಒಟ್ಟಾಗಿ ಕೂಡಿಕೊಂಡು ರವಿ ಚನ್ನಣ್ಣವರ ಸಾಹೇಬರು ಹೇಳಿದಂತೆ ಪಾಳೆಯ ಪ್ರಕಾರ ಆಟೋ ಚಾಲನೆ ಮಾಡೋಣ ಎಂದಿದ್ದಕ್ಕೆ ಅವರುಗಳು ನಮ್ಮ ವಿರುದ್ಧ ಬಿದ್ದು, ನಮ್ಮ ಆಟೋ ಚಾಲಕರ ಜೊತೆ ಜಗಳಕ್ಕಿಳಿದರು. ಈ ಗೌಳಿ ಜನಾಂಗದ ಆಟೋ ಚಾಲಕರು ನಾವು ಕೇಳಿಕೊಂಡಿದ್ದಕ್ಕೆ ಮನ್ನಣೆ ಕೊಡದೇ, “ನಾವು ಯಾವ ಸಾಹೇಬನ ಮಾತೂ
ಕೇಳುವುದಿಲ್ಲ. ಮಕ್ಕಳಾ ನಿಮ್ಮನ್ನ ಇಲ್ಲಿಂದ ಓಡಿಸಿ ಬಿಡ್ತೀವಿ, ನೀವು ಇಲ್ಲಿ ಆಟೋ ತಂದಿರಬಾರದು ಹಂಗೆ ಮಾಡ್ತೀವಿ,
ನಾವು ನಿಮ್ಮನ್ನೆಲ್ಲಾ ನೋಡ್ಕೊತೀವಿ, ನೀವು ಹ್ಯಾಂಗ ಪ್ಯಾಸೆಂಜರ್ ರನ್ನು ಹತ್ತಕ್ಕೋತೀರಿ ನೋಡೇ ಬಿಡ್ತೀವಿ, ಬೋಸ್ತಿ ಮಕ್ಕಳಾ” ಎಂದು ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತ, ನಮ್ಮ ಆಟೋ ಚಾಲಕರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.ನಮ್ಮ ಆಟೋ ಚಾಲಕರನ್ನು ಯಾರನ್ನೂ ಇಲ್ಲಿ ಆಟೋ ನಿಲ್ಲಿಸಲು ಬಿಡುವದಿಲ್ಲ ಎಂದು ಧಮಕಿ ಹಾಕಿದ್ದಾರೆ.
ಈ 14 ಆಟೋ ಚಾಲಕರ ವರ್ತನೆಯಿಂದ ಇಡೀ ರೈಲ್ವೇ ಸ್ಟೇಶನ್ ಪರಿಸರದ ಶಾಂತಿ ಭಂಗವಾಗಿದ್ದು,
ಪ್ರಯಾಣಿಕರೂ ಕೂಡ ಅಸಹ್ಯ ಪಡುವಂತೆ ವರ್ತಿಸುತ್ತಾರೆ. ಇವರಿಂದ ನಮ್ಮ ಆಟೋ ಚಾಲಕರು ಜೀವದ ಭಯದಿಂದ ಹೆಚ್ಚು ಹೊತ್ತು ಆಟೋ ಚಲಾಯಿಸಲು ಸಾಧ್ಯವಾಗದಂತೆ ಆಗಿದೆ ಮತ್ತು ಪ್ರಯಾಣಿಕರಿಂದ ಲಗೇಜ್‌ಗಳನ್ನು ಕಸಿದುಕೊಂಡು ಬರುವುದರಿಂದ ಈ ಚಾಲಕರಿಗೆ ಬಾಡಿಗೆ ಸಿಗದಂತಾಗಿ ತುಂಬಾ ತೊಂದರೆ ಅನುಭವಿಸುವ ಸಂಧರ್ಬಗಳು ಒದಗಿ ಬಂದಿರುತ್ತವೆ.
ಕಾರಣ ಮಾನ್ಯರು ಸದರಿ ನನ್ನ ದೂರನ್ನು ಸ್ವೀಕರಿಸಿ ತಪ್ಪಿತಸ್ಥ ಗೌಳಿ ಜನಾಂಗದ ಈ ಆಟೋ ಚಾಲಕರ
ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ವರದಿ::
ರಘು ನರಗುಂದ
ಧಾರವಾಡ

0 Response to "ಧಾರವಾಡದ ಆಟೋ ಚಾಲಕರಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ-Auto Drivers"

Post a Comment

Article Top Ads

Central Ads Article 1

Middle Ads Article 2

Article Bottom Ads