-->
ಜನವಿರೋಧಿ, ರೈತವಿರೋಧಿ ಹಾಗೂ ಕಾರ್ಮಿಕ ವಿರೋಧಿ, ವಿದ್ಯುತ್‌ (ತಿದ್ದುಪಡಿ) ಮಸೂದೆ 2021,ವಿದ್ಯುತ್ ವಲಯದ ಖಾಸಗೀಕರಣ ಹಿಂಪಡೆಯಲು ಆಗ್ರಹ !!-Dharwad

ಜನವಿರೋಧಿ, ರೈತವಿರೋಧಿ ಹಾಗೂ ಕಾರ್ಮಿಕ ವಿರೋಧಿ, ವಿದ್ಯುತ್‌ (ತಿದ್ದುಪಡಿ) ಮಸೂದೆ 2021,ವಿದ್ಯುತ್ ವಲಯದ ಖಾಸಗೀಕರಣ ಹಿಂಪಡೆಯಲು ಆಗ್ರಹ !!-Dharwad

ಕರ್ನಾಟಕ ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘ(ರಿ)
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್
ಆಲ್ ಇಂಡಿಯಾ ಪವರ್‌ಮೆನ್ಸ್ ಫೆಡರೇಶನ್
AIUTUC-AIPF

ಆಗಷ್ಟ 10 -2021 ಅಖಿಲ ಭಾರತ ಮುಷ್ಕರ
ಜನವಿರೋಧಿ, ರೈತವಿರೋಧಿ ಹಾಗೂ ಕಾರ್ಮಿಕ ವಿರೋಧಿ, ವಿದ್ಯುತ್‌ (ತಿದ್ದುಪಡಿ) ಮಸೂದೆ 2021,
ವಿದ್ಯುತ್ ವಲಯದ ಖಾಸಗೀಕರಣ ಹಿಂಪಡೆಯಲು ಆಗ್ರಹ !!
ಧಾರವಾಡ::
ಇಂದು ಕೇಂದ್ರ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ವಿದ್ಯುತ್‌ (ತಿದ್ದುಪಡಿ) ಮಸೂದೆ 2021 ಹಾಗೂ ವಿದ್ಯುತ್ ವಲಯದ ಖಾಸಗೀಕರಣ
ವಿರುದ್ಧ ಎಐಯುಟಿಯುಸಿ ಸಂಯೋಜಿತ ಆಲ್ ಇಂಡಿಯಾ ಪವರ್‌ಮೆನ್ಸ್ ಫೆಡರೇಷನ್ (ಎಐಪಿಎಫ್) ಅಖಿಲ ಭಾರತ ಪ್ರತಿಭಟನಾ ದಿನವನ್ನಾಗಿ
ಆಚರಿಸಲು ನೀಡಿದ ಕರೆಯ ಅಂಗವಾಗಿ ಹೆಸ್ಕಾಂ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ಸಂಘ(ರಿ) ದ ಗಂಗಾಧರ ಬಡಿಗೇರ ಮಾತನಾಡಿ, ಈಗಾಗಲೇ ಕೃಷಿ ನೀತಿಗಳು ಸೇರಿದಂತೆ ವಿದ್ಯುತ್ ಮಸೂದೆ 2021 ರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು ಇಡೀ ಕಾರ್ಮಿಕ ವರ್ಗ, ರೈತ ಸಮೂಹ ಹಾಗೂ ಜನತೆ ತನ್ನ ವಿರೋಧ ವ್ಯಕ್ತ ಪಡಿಸುತ್ತಿದೆ.ವಿದ್ಯುತ್ ವಲಯದ ನೌಕರರ ಐಕ್ಯ ಹೋರಾಟದ ಒತ್ತಡದಿಂದ
ಕೇಂದ್ರವು ಸಧ್ಯಕ್ಕೆ ಮಸೂದೆ ಮಂಡನೆಯನ್ನು ತಡೆಹಿಡಿದಿದೆ. ಇದು ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಕಾರ್ಪೋರೇಟ್ ಕಂಪನಿಗಳ ಪರವಾದ ಕೇಂದ್ರ ಸರ್ಕಾರವು ಸೂಕ್ತ ಅವಕಾಶದಲ್ಲಿ ಮತ್ತೆ ಜಾರಿಗೆ ತರಲು ಪ್ರಯತ್ನಿಸುತ್ತದೆ.ಆದ್ದರಿಂದ ಉದ್ದೇಶಿತ ಮಸೂದೆ ರದ್ದಾಗುವವರೆಗೂ ಈ
ರಾಜೀರಹಿತ ಐಕ್ಯ ಹೋರಾಟವನ್ನು ಮುಂದುವರೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ,ರಮೇಶ ಹೊಸಮನಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆ-2021
ಒಂದೇ ಏಟಿಗೆ ಖಾಸಗಿ ಕುಳಗಳಿಗೆ ಒಪ್ಪಿಸುವ ಹೀನ ದುರುದ್ದೇಶವನ್ನು ಹೊಂದಿದೆ. ಇದರಿಂದ ಕೆಪಿಸಿಎಲ್, ಕೆಪಿಟಿಸಿಎಲ್, ಹೆಸ್ಕಾಂ,ಬೆಸ್ಕಾಂ, ಮೆಸ್ಕಾಂ, ಹಾಗೂ ಜೆಸ್ಕಾಂ ಇತ್ಯಾದಿ ವಿದ್ಯುತ್ ಉತ್ಪಾದನೆ-ಸರಬರಾಜು ಹಾಗೂ ವಿತರಣೆಯ ಕಂಪನಿಗಳು ಖಾಸಗೀ ಕಾರ್ಪೋರೇಟ್ ಕಂಪನಿಗಳ ಕೈ ವಶವಾಗಲಿವೆ.ಈಗಾಗಲೇ ಮೀಟರ್‌ಗಳಿಗೆ ಸಿಮ್ ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಇನ್ನು ಮುಂದೆ ರಿಚಾರ್ಜ ಮಾಡಿದರೆ ಮಾತ್ರ ಬೆಳಕು ಇಲ್ಲದಿದ್ದರೆ ಕತ್ತಲು ಎಂಬಂತಾಗುತ್ತದೆ.ಬಡವರಿಗಾಗಿ ಇದ್ದ ಭಾಗ್ಯ ಜ್ಯೋತಿ,ಕುಟೀರ ಜ್ಯೋತಿ ಗಳಂತಹ ಯೋಜನೆಗಳು ರದ್ದಾಗುತ್ತವೆ.ರೈತರ ಪಂಪ್‌ಸೆಟ್‌ಗಳಿಗೂ ಇದೇ ಗತಿಯಾದರೆ ರೈತ ಕುಲವೇ ಅಳಿವಿನ ಅಂಚಿಗೆ ಬಂದು ನಿಲ್ಲುತ್ತದೆ. ಈ ನೀತಿಗಳ ವಿರುದ್ಧ ದೇಶದೆಲ್ಲಡೆ
ರೈತರ-ಕಾರ್ಮಿಕರ-ದುಡಿಯುವ ಜನತೆಯ ಬೃಹತ್ ಹೋರಾಟಗಳು ಅವಿರತವಾಗಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ
ನಿಟ್ಟಿನಲ್ಲಿ ವಿದ್ಯತ್ ನೌಕರರು ಈ ಹೋರಾಟವನ್ನು ಬಲಪಡಿಸಲು ಮುಂದಡಿಯಿಡಬೇಕು ಎಂದರು. ಪ್ರತಿಭಟನೆಯಲ್ಲಿ ಶ್ರೀಮತಿ ಪಾರ್ವತಿ ಕೌದಿ,
ಶ್ರೀಮತಿ ಮಂಜುಳಾ ಪಾಟೀಲ, ಶ್ರೀಮತಿ ವಿಜಯಲಕ್ಷ್ಮೀ ಕಲಬುರ್ಗಿ ಶ್ರೀ, ಮೌಲಾಸಾಬ ಕಿರೇಮನಿ, ಸುರೇಶಯ್ಯ ಚಿಕ್ಕಮಠ, ವಿಶಾಲ,
ಪದ್ಮಾವತಿ ಎರತೋಟ ಮುಂತಾದ ಡಾಟಾ ಎಂಟ್ರಿ ಆಪರೇಟರ್ ಗಳು ಕಛೇರಿ ಸಹಾಯಕರು ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ
ಕೇಂದ್ರ ಕಛೇರಿಯ ಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮನವಿ ಪತ್ರವನ್ನು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ
ಶ್ರೀಮತಿ ಡಿ, ಭಾರತಿ ಯವರಿಗೆ ನೀಡಲಾಯಿತು.
ಬೇಡಿಕೆಗಳು :
1) ವಿದ್ಯುತ್‌ (ತಿದ್ದುಪಡಿ) ಮಸೂದೆ 2021 ರದ್ದುಗೊಳಿಸಿ,
2) ವಿದ್ಯುತ್ ವಲಯದ ಎಲ್ಲಾ ಹಂತಗಳ ಬಾಸಗಿಕರಣ ಕೈಬಿಡಿ.
3) ಎಲ್ಲಾ ಗುತ್ತಿಗೆ ನೌಕರರ ಸೇವೆ ಖಾಯಂಗೊಳಿಸಿ


Reported By:
ರಘು ನರಗುಂದ
ಧಾರವಾಡ

0 Response to "ಜನವಿರೋಧಿ, ರೈತವಿರೋಧಿ ಹಾಗೂ ಕಾರ್ಮಿಕ ವಿರೋಧಿ, ವಿದ್ಯುತ್‌ (ತಿದ್ದುಪಡಿ) ಮಸೂದೆ 2021,ವಿದ್ಯುತ್ ವಲಯದ ಖಾಸಗೀಕರಣ ಹಿಂಪಡೆಯಲು ಆಗ್ರಹ !!-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads