
(ವಾರ್ಡ್ ನಂ.15) ಆಮ್ ಆದ್ಮಿ ಪಕ್ಷದ ನಟರಾಜ ನಾಶಿರವರಿಂದ ಭರ್ಜರಿ ಪ್ರಚಾರ-Dharwad
Wednesday, August 25, 2021
Comment
ಧಾರವಾಡ: ಆಮ್ ಆದ್ಮಿ ಪಕ್ಷದಿಂದ ಭರ್ಜರಿ ಪ್ರಚಾರ
ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ವಾರ್ಡ್ ನಂ.15ರ ಆಮ್ ಆದ್ಮಿ ಪಕ್ಷದ ನಟರಾಜ ನಾಶಿ ರವರು , ಇಂದು ಧಾರವಾಡ ಹಿಂದಿ ಪ್ರಚಾರ ಸಭಾದ ಹತ್ತಿರ ಇರುವ ಶ್ರೀ ಗಣೇಶ ಗುಡಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದರು.
ಶ್ರೀ ಗಣೇಶ ಗುಡಿಯಿಂದ 15ನೇ ವಾರ್ಡ್ ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತದಾರರ ಮನೆ ಮನೆಗೆ ತೆರಳಿ , ತಮ್ಮ ಅತ್ಯಮೂಲ್ಯ ಮತವನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ನಟರಾಜ ನಾಶಿ ರವರ ಬೆಂಬಲಿಗರು,ಮುಂತಾದವರು ಉಪಸ್ಥಿತರಿದ್ದರು.
ವರದಿ:
ರಘು ನರಗುಂದ
ಧಾರವಾಡ
0 Response to "(ವಾರ್ಡ್ ನಂ.15) ಆಮ್ ಆದ್ಮಿ ಪಕ್ಷದ ನಟರಾಜ ನಾಶಿರವರಿಂದ ಭರ್ಜರಿ ಪ್ರಚಾರ-Dharwad"
Post a Comment