-->
ಸೊಪ್ಪುಗಳನ್ನ ತಿನ್ನುವ ಯುವಕ-"ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಗಾದೆಮಾತು ಜನಜನಿತ-Savadatti-Kisan Jagruti TV

ಸೊಪ್ಪುಗಳನ್ನ ತಿನ್ನುವ ಯುವಕ-"ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಗಾದೆಮಾತು ಜನಜನಿತ-Savadatti-Kisan Jagruti TV

 

 "ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಗಾದೆಮಾತು ಜನಜನಿತ. ಇನ್ನೂ ಮನುಷ್ಯ ತನ್ನ ಆರೋಗ್ಯಕರ ಹಿತಕರವಾದ ಕೆಲವೇ ಸೊಪ್ಪು ಸೇವಿಸುತ್ತಾನೆ. ಆದರೆ, ಇಲ್ಲೊಬ್ಬ ಯುವಕ ಮಾತ್ರ ಹತ್ತಾರು ಸೊಪ್ಪುಗಳನ್ನು ಸೇವಿಸುವ ಮೂಲಕ ಅಚ್ಚರಿಜನನ ಮೂಡಿಸುತ್ತಿದ್ದಾನೆ. ಈತನಿಗೆ "ಸಿಹಿ-ಕಹಿ" ರುಚಿಯಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ. ನೋಡನೋಡುತ್ತಲೇ ಹಲವು ಸೊಪ್ಪುಗಳನ್ನು ಸೇವಿಸಿ ಎಂಥವರನ್ನೂ ಕ್ಷಣಮಾತ್ರದಲ್ಲೇ ಮಂತ್ರಮುಗ್ಧಗೊಳಿಸುತ್ತಿದ್ದಾನೆ.

ನಾವು ಹೇಳುತ್ತಿರುವುದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮನಗುಡ್ಡದ ಮಡಿಲಲ್ಲಿರುವ ಉಗರಗೋಳದ ಯುವಕ ಬುಡನಸಾಬ್ ಹೊಸಮನಿ. ವೃತ್ತಿಯಿಂದ ಈತ ಗೌಂಡಿ. ಆದರೆ, ಪ್ರವೃತ್ತಿಯಿಂದ ಯೋಗಪಟು. ಸಾಹಸ ಮಾಡುವಲ್ಲಿ ಸದಾ ಮುಂದೆ. ಈ ಹಿಂದೆ ಚಲಿಸುತ್ತಿರುವ ಸೈಕಲ್ ಹಾಗೂ ಬೈಕ್ ಮೇಲೆಯೇ ನಿಂತು ಹಾಗೂ ಮಲಗಿ ನಾನಾ ಸಾಹಸ ಮೆರೆದಿದ್ದ ಈತ, ಇಂದು ನಾನಾ ತರಹದ ಸೊಪ್ಪು ಸೇವನೆ ಮೂಲಕ ಗಮನ ಸೆಳೆಯುತ್ತಿದ್ದಾನೆ.

ಸಪ್ತ ಕೊಳ್ಳ, ಸಪ್ತಗುಡ್ಡಗಳ ಮಧ್ಯೆ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ನೆಲೆನಿಂತಿದ್ದಾಳೆ. ಈ ಏಳುಕೊಳ್ಳಗಳಲ್ಲಿ ಹೆಗ್ಗೋಳವೂ ಒಂದು. ಉಗರಗೋಳ ಗುಡ್ಡದ ಮೇಲಿರುವ ಈ ಪ್ರದೇಶದಲ್ಲೇ ಪುಟ್ಟದಾದ ಮನೆ ಕಟ್ಟಿಕೊಂಡಿರುವ ಬುಡನ್, ತಾನೊಬ್ಬನೇ ಅಲ್ಲಿ ವಾಸಿಸುತ್ತಿದ್ದಾನೆ. ಕತ್ತಲಾದರೆ ಆ ಪ್ರದೇಶಕ್ಕೆ ಹೋಗಲು ಎಂಥವರೂ ಹೆದರುತ್ತಾರೆ. ಆದರೆ, ಈತ ಐದಾರು ವರ್ಷಗಳಿಂದ ಸಂತಸದಿಂದ ವಾಸಿಸುತ್ತಿದ್ದಾನೆ. ನೈಸಗರ್ಿಕ ಪರಿಸರದಲ್ಲಿ ನೆಮ್ಮದಿಯಿಂದ ದಿನದೂಡುತ್ತಿದ್ದಾನೆ. ಅಲ್ಲದೆ, ಆ ಪರಿಸರದಲ್ಲಿ ಬೆಳೆದುನಿಂತಿರುವ ಹಲವು ಮರಗಳ ತಪ್ಪಲನ್ನು ತಿನ್ನುತ್ತಿದ್ದಾನೆ.

ಕೇವಲ 3ನೇ ತರಗತಿ ಓದಿರುವ ಈತ Kisan Jagruti TV ವಾಹಿನಿಯೊಂದಿಗೆ ಮಾತನಾಡುತ್ತ, ನಾನು ಹಲವು ವರ್ಷಗಳಿಂದ ಯೋಗಾಸನ ಹಾಗೂ ಸಾಹಸ ಕಲೆ ಪ್ರದಶರ್ಿಸುತ್ತ ಬಂದಿದ್ದೇನೆ. ಈಚೆಗೆ ಜಗತ್ತಿಗೆ ಕರೊನಾ ದಾಂಗುಡಿ ಇಟ್ಟಿದೆ. ಕರೊನಾ ವಿರುದ್ಧ ಸೆಣಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಿರುವುದರಿಂದ ಇಲ್ಲಿರುವ ಎಲ್ಲ ತಪ್ಪಲುಗಳನ್ನು ತಿನ್ನುತ್ತಿದ್ದೇನೆ. ಆದರೆ, ಅವುಗಳ ಹೆಸರು ಗೊತ್ತಿಲ್ಲ ಎನ್ನುತ್ತಾನೆ. 

ಈ ತಪ್ಪಲನ್ನು ತಿನ್ನುವುದರಿಂದ ಆರೋಗ್ಯ ಹದಗೆಡುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ, ಐದಾರು ತಿಂಗಳಿಂದ ನಿತ್ಯ ಬೆಳಗ್ಗೆ ಸೇವಿಸುತ್ತಿದ್ದರೂ, ನನ್ನ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ. ಶರೀರ ಇನ್ನಷ್ಟು ಸದೃಢವಾಗುತ್ತಿದೆ. ಶರೀರಕ್ಕೆ ಇನ್ನಷ್ಟು ಚೈತನ್ಯ ಸಿಗುತ್ತಿದ್ದು, ಇಡೀ ದಿನ ಖುಷಿಯಿಂದ ಗೌಂಡಿ ಕೆಲಸ ಮಾಡಲು ಅನುಕೂಲವಾಗಿದೆ ಎನ್ನುತ್ತಾನೆ.

ಈತ ತಪ್ಪಲನ್ನು ಸೇವಿಸುವುದನ್ನು ನೋಡುವುದಕ್ಕಾಗಿಯೇ ಸುತ್ತಲಿನ ಗ್ರಾಮಗಳಿಂದ ಜನರು ಬರುತ್ತಾರೆ. ಇಂತಹ ತಪ್ಪಲನ್ನು ತಿನ್ನಲು ನಿನ್ನಿಂದ ಆಗದು ಎಂದು ಶರ್ಯತ್ತು ಕಟ್ಟಿ ಸೋಲುಂಡಿದ್ದಾರೆ. ಹಲವರು ವೈಯಕ್ತಿಕ ಕಾಣಿಕೆ ನೀಡಿ ಭೇಷ್ ಎಂದು ಬೆನ್ನು ತಟ್ಟಿದ್ದಾರೆ. 


ಬಡತನದ ಮಧ್ಯೆಯೂ ಗೌಂಡಿ ಕೆಲಸ ಮಾಡುತ್ತ ಬದುಕಿನ ಬಂಡಿ ದೂಡುತ್ತಿರುವ ಬುಡನ್, ನಿತ್ಯ ಬೆಳಗ್ಗೆ ಮತ್ತು ಸಂಜೆ ಯೋಗಾಭ್ಯಾಸ ಮಾಡುತ್ತಾನೆ. 100ಕ್ಕೂ ಅಧಿಕ ಆಸನಗಳನ್ನು ಪ್ರದಶರ್ಿಸಿ ಸಾಧನೆ ಮೆರೆದಿದ್ದಾನೆ. ಗದುಗಿನ ತೋಂಟದಾರ್ಯ ಮಠ, ಬೆಳಗಾವಿ, ಬೆಂಗಳೂರು, ರಾಮದುರ್ಗ ಮತ್ತಿತರಕ ಕಡೆಗಳ ಸಂಘ-ಸಂಸ್ಥೆಗಳು ಈತನನ್ನು ಸತ್ಕರಿಸಿ ಗೌರವಿಸಿವೆ.

==================

Reported By : Team Kisan Tv

0 Response to "ಸೊಪ್ಪುಗಳನ್ನ ತಿನ್ನುವ ಯುವಕ-"ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಗಾದೆಮಾತು ಜನಜನಿತ-Savadatti-Kisan Jagruti TV"

Post a Comment

Article Top Ads

Central Ads Article 1

Middle Ads Article 2

Article Bottom Ads