-->
ಮುಖ್ಯಾಧಿಕಾರಿ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗುತ್ತಿಲ್ಲ- ಉಪಾಧ್ಯಕ್ಷೆ ಊರಮ್ಮ ಆರೋಪ-kudligi-Kisan Jagruti Tv

ಮುಖ್ಯಾಧಿಕಾರಿ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗುತ್ತಿಲ್ಲ- ಉಪಾಧ್ಯಕ್ಷೆ ಊರಮ್ಮ ಆರೋಪ-kudligi-Kisan Jagruti Tv

 


ಕೂಡ್ಲಿಗಿ:ಮುಖ್ಯಾಧಿಕಾರಿ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗುತ್ತಿಲ್ಲ- ಉಪಾಧ್ಯಕ್ಷೆ ಊರಮ್ಮ ಆರೋಪ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಪಂ ಮುಖ್ಯಾಧಿಕಾರಿ ಪಕೃದ್ದಿನ್ ತಮ್ಮ ವಾರ್ಡಿನ ಅಭಿವೃದ್ಧಿಗೆ ಹಾಗೂ ಸ್ವಚ್ಚತೆಗೆ ಸಹಕರಿಸುತ್ತಿಲ್ಲ ಎಂದು ಉಪಾಧ್ಯಕ್ಷೆ ಊರಮ್ಮ ದೂರಿದ್ದಾರೆ.

ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 15ನೇ ವಾರ್ಡ್ ನ ಪಪಂ ಸದಸ್ಯರಾದ ಶ್ರೀಮತಿ ಊರಮ್ಮ ಪತ್ರಿಕಾ ಗೋಷ್ಠಿಮೂಲಕ ಅವರು ದೂರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು

ಮಾನ್ಯ ಕ್ಷೇತ್ರದ ಶಾಸಕರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ನಿಷ್ಠೆಯಿಂದ  ಶ್ರಮಿಸುತ್ತಿದ್ದಾರೆ,ಅವರ ಪ್ರೇರಣೆಯಿಂದಾಗಿ ಪಪಂ ಸದಸ್ಯರಾದ ನಾವೂ ಕೂಡ ನಮ್ಮ ವಾರ್ಡ್ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ.ಆದರೆ ಪಪಂ 

ಮುಖ್ಯಾಧಿಕಾರಿ ಪಕೃದ್ಡೀನ್ ರವರು, ನಮ್ಮ ಜನಪರ ಅಹವಾಲಿಗೆ ಮನ್ನಣೆ ನೀಡುತ್ತಿಲ್ಲ ಸ್ಪಂಧಿಸುತ್ತಿಲ್ಲ. ಪಪಂ ವ್ಯಾಪ್ತಿಯ 15ನೇ ವಾರ್ಡ್ ನಿಂದ ಸಾಮ‍ಾನ್ಯ ಮಹಿಳೆ ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದು,ಶಾಸಕರ ಕೃಪಾಕಟಾಕ್ಷದಿಂದ ಹಾಗೂ ಸರ್ವಸದಸ್ಯರ ಸಹಕಾರದಿಂದ ಉಪಾಧ್ಯಕ್ಷರಾಗಿದ್ದೇವೆ.ಆದರೆ ನಾವು ನಮ್ಮ ವಾರ್ಡ್ ನ ಸಾರ್ವಜನಿಕರ ಕನಿಷ್ಠ ಅಹವಾಲಿಗೆ  ಸ್ಪಂಧಿಸಲಾಗದ ದುಸ್ಥಿತಿಯಲ್ಲಿದ್ದೇವೆ.ಅದಕ್ಕೆ ಕಾರಣ ಮುಖ್ಯಾಧಿಕಾರಿಗಳ ಅಸಹಕಾರತೆ ಹಾಗೂ ನಮ್ಮ ವಿಷಯದಲ್ಲಿ,ಅವರು ತೋರುತ್ತಿರುವ ಅನಗತ್ಯ ವಿಳಂಬ ಹಾಗೂ ನಿರ್ಲಕ್ಷ್ಯಧೋರಣೆ ಕಾರಣವಾಗಿದೆ ಎಂದು ಊರಮ್ಮ ದೂರಿದರು.

ಈ ಸಂಬಂಧಿಸಿದಂತೆ ಅವರಲ್ಲಿ ನಮ್ಮ ಬಗ್ಗೆ ಇರುವ ತಮ್ಮ ನಿರ್ಲಕ್ಷ್ಯೆ ಧೋರಣೆ ನಿಲುವನ್ನ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ,ಆದರೆ ಪ್ರಯೋಜನವಾಗಿಲ್ಲ ಇದರಿಂದಾಗಿ ನಮ್ಮ ಸ್ವಾಭಿಮಾನಕ್ಕೆ ತೀವ್ರ ಧಕ್ಕೆಯಾದೆ.ಎಲ್ಲದಕ್ಕಿಂತ ಹೆಚ್ಚಾಗಿ ವಾರ್ಡಿನ ಸಾರ್ವಜನಿಕರಿಗೆ ನಮ್ಮಿಂದ ಯಾವುದೇ ಸೇವೆ ಸಲ್ಲಿಸಲಾಗುತ್ತಿಲ್ಲವೆಂಬ ಬೇಸರವಿದೆ.

ಈ ಹಿನ್ನಲೆಯಲ್ಲಿ ನಾವು ಪರಿಸ್ಥಿತಿಯನ್ನ ಅಧಿಕಾರಿಯ ನಿರ್ಲಕ್ಷ್ಯಧೋರಣೆಯ ನಿಲುವನ್ನು,ಸಾರ್ವಜನಿಕರಿಂದ ಆಯ್ಕೆಯಾದ ನಾವು ಈ ಮೂಲಕ ವಾಸ್ಥವವನ್ನು ಸಾರ್ವಜನಿಕ ಪಡಿಸುವುದು ಅನಿವಾರ್ಯವಾಗಿದೆ. ಕಾರಣ ಈ ಪತ್ರಿಕಾ ಗೋಷ್ಠಿಯ ಮೂಲಕ ತಮ್ಮ ಮೂಲಕ, ಪಪಂನಲ್ಲಿರುವ ವಸ್ಥು ಸ್ಥಿತಿ ನಮ್ಮ ಅನುಸಂಕಟವನ್ನು ಈ ಮೂಲಕ ಸ್ಪಷ್ಟಪಡಿಸಲು ಇಚ್ಚಿಸುತ್ತಿದ್ದೇವೆ.

ನಾವು 15ನೇ ವಾರ್ಡಿನ ಸದಸ್ಯ ಯಾಗಿದ್ದು,ಪರಿಶಿಷ್ಟ ಪಂಗಡದವರೆಂಬ ಹಾಗೂ ಅನಕ್ಷರಸ್ಥ ಮಹಿಳೆ ಎಂಬ ಕಾರಣಕ್ಕಾಗಿ ನಮ್ಮನ್ನು ಪಪಂ ಮುಖ್ಯಾಧಿಕಾರಿ ನಿರ್ಲಕ್ಷ್ಯಸುತ್ತಿದ್ದಾರೆಂದರು.

ಈ ಸಂಬಂಧಿಸಿದಂತೆ ನಾವು ಇಲಾಖಾ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಲ್ಲಿ,

ದೂರು ಸಲ್ಲಿಸಲಾಗುವುದು ಮತ್ತು ಜಿಲ್ಲಾಮಟ್ಟದ ಮ‍ಾಧ್ಯಮ ಗೋಷ್ಠಿ ನಡೆಸಲಾಗುವುದು.ಕಾರಣ ತಾವು ಪ್ರಥಮವಾಗಿ ನಮ್ಮ ಈ ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸುವ ಮೂಲಕ,ನಮ್ಮ ಹಾಗೂ ಸಾರ್ವಜನಕರಲ್ಲಿರುವ ಗೊಂದಲ ನಿವಾರಿಸಬೇಕಾಗಿದೆ ಎಂದರು.

ಪಪಂ ಮುಖ್ಯಾಧಿಕಾರಿಗಳ ಮೇಲೆ ಹಲವಾರು ಆರೋಪಗಳಿದ್ದು, ಮುಖ್ಯಾಧಿಕಾರಿ ಸ್ಪಷ್ಟವಾಗಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ ಎಂದು ಉಪಾಧ್ಯಕ್ಷೆ ಊರಮ್ಮ  ದೂರಿದ್ದಾರೆ.

ಮುಖ್ಯಾಧಿಕಾರಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಗಳಲ್ಲಿ, ಭಾರೀ ಅವ್ಯವಹಾರ ಮತ್ತು ಕಳಪೆ ನಿರ್ವಹಣೆ ಮಾಡಲಾಗತ್ತಿದೆ, ಮುಖ್ಯಾಧಿಕಾರಿಯಿಂದ ಹತ್ತು ಲಕ್ಷ ರೂದಷ್ಟು ಖೊಟ್ಟಿ ಬಿಲ್ಲು ಸೃಷ್ಠಿ ಮಾಡಿದ್ದಾರೆ,ಕೆಲ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ಮಾಡಿರುವ ಬಗ್ಗೆ ತಿಳಿದುಬಂದಿದೆ,ಕೆಲ ಕಾಮಗಾರಿಗಳನ್ನು ಸ್ವತಃ ಅವರೇ ನಿರ್ವಹಿಸುತ್ತಿದ್ದಾರೆ,

ಕಚೇರಿಯಲ್ಲಾಗುವ ಕಾರ್ಯಕ್ರಮಗಳಿಗೆ ಅಹ್ವಾನಿಸುತ್ತಿಲ್ಲ,

ಕಾರ್ಯಕ್ರಗಳ ಮಾಹಿತಿ ನೀಡುತ್ತಿಲ್ಲ ಸಂಪೂರ್ಣ ನಿರ್ಲಕ್ಷ್ಯಸಲಾಗುತ್ತಿದೆ,

 ಪಪಂ ಅಧಿಕಾರಿಯ ದುರಾಢಳಿತ ಮತ್ತು ನಿರ್ಲಕ್ಷ್ಯ ಧೋರಣೆ ಮಿತಿಮೀರಿದ್ದು.

ಅವರು ನಮ್ಮ ವಾರ್ಡನ್ನು ಮತ್ತು ನಮ್ಮ ವಾರ್ಡಿನ ಸಾರ್ವಜನಿಕರನ್ನು ನಿರ್ಲಕ್ಷಿಸುತ್ತಿದ್ದು,ಅದನ್ನು ನಾವು ಈ ಮೂಲಕ ಭಹಿರಂಗಪಡಿಸಿ ಜನರಿಗೆ ಮನವರಿಕೆ ಮಾಡಿಕೊಡಲು ಇಚ್ಚಿಸುತ್ತಿದ್ದೇವೆ. ಕಾರಣ ತಾವು ನಮ್ಮ ಪತ್ರಿಕಾ ಪ್ರಕಟಣೆ ಮೂಲಕ  ಬಹಿರಂಗ ಪಡಿಸಬೇಕೆಂದು ಊರಮ್ಮ ಈ ಮೂಲಕ ಕೋರಿದ್ದಾರೆ.ಈ ಸಂದರ್ಭದಲ್ಲಿ  ಬಾಣದ ಶಿವಶಂಕರ್, ಬಿಜೆಪಿ ಯುವ ಮುಖಂಡರಾದ ಬಾಣದ ಶಿವಮೂರ್ತಿ,ತೂಗದಲಿ ರಾಘವೇಂದ್ರ,ಗುಜ್ಜಾರ್ ಗಣೇಶ್,

ಎರಿಸ್ವಾಮಿ,ಕೆ.ಬಿ.ಹನುಮಂತ,

 ನಾಗರಾಜ್,ಮೂರ್ತಿ,ಸಿರಿಬಿ ರಾಘವೇಂದ್ರ ಮುಂತಾದವರಿದ್ದರು

0 Response to "ಮುಖ್ಯಾಧಿಕಾರಿ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗುತ್ತಿಲ್ಲ- ಉಪಾಧ್ಯಕ್ಷೆ ಊರಮ್ಮ ಆರೋಪ-kudligi-Kisan Jagruti Tv"

Post a Comment

Article Top Ads

Central Ads Article 1

Middle Ads Article 2

Article Bottom Ads