-->
ಕಿಸಾನ್ ಜಾಗೃತಿ ವಿಕಾಸ್ ಸಂಘದಿಂದ ಕ.ಗ್ರಾ.ಬ್ಯಾಂಕ್ ಗೆ ಮನವಿ-Karnataka Gramin Bank-Protest-Kisan Jagruti Tv

ಕಿಸಾನ್ ಜಾಗೃತಿ ವಿಕಾಸ್ ಸಂಘದಿಂದ ಕ.ಗ್ರಾ.ಬ್ಯಾಂಕ್ ಗೆ ಮನವಿ-Karnataka Gramin Bank-Protest-Kisan Jagruti Tv

ಕಂಪ್ಲಿ

ಒಟಿಎಸ್ ಮುಖಾಂತರ ರೈತರನ್ನು ಋಣಮುಕ್ತರನ್ನಾಗಿ ಮಾಡುವಂತೆ ಮನವಿ


ಕಿಸಾನ್ ಜಾಗೃತಿ ವಿಕಾಸ್ ಸಂಘದಿಂದ ಕ.ಗ್ರಾ.ಬ್ಯಾಂಕ್ ಗೆ ಮನವಿ

 ಕಂಪ್ಲಿ ತಾಲೂಕಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ರೈತರು ಕೃಷಿ ಉದ್ದೇಶಕ್ಕಾಗಿ

ಪಡೆದಿರುವಂತಹ ಸಾಲವನ್ನು ಒಟಿಎಸ್ ಮುಖಾಂತರ

ಋಣಮುಕ್ತರನ್ನಾಗಿ ಮಾಡುವಂತೆ ಕಿಸಾನ್ ಜಾಗೃತಿ ವಿಕಾಸ್ ಸಂಘ ಮನವಿ ಸಲ್ಲಿಸಿದ್ದಾರೆ.

 ಈ ಸಂದರ್ಭದಲ್ಲಿ ಮಾತನಾಡಿದ ಪಿ. ಯುಗೇಂಧರ್ ನಾಯ್ಡು ರವರು ಒಂದು ಸಾವಿರಕ್ಕೂ ಹೆಚ್ಚು ರೈತರು ನನಗೆ ದೂರವಾಣಿ

ಮುಖಾಂತರ ಸಂಪರ್ಕಿಸಿ, ಬ್ಯಾಂಕಿನ ಅಧಿಕಾರಿಗಳು ಸಾಲವನ್ನು ಪಾವತಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ರೈತರು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.


 ಕೊರೋನಾ ಅಪ್ಪಳಿಸಿದ ಹಿನ್ನಲೆ ಸಾಕಷ್ಟು ರೈತರಿಗೆ ಬೆಳೆ ಇದ್ದರೂ,

ಬೆಂಬಲ ಬೆಲೆ ಇಲ್ಲದ ಪರಿಣಾಮ ಸಂಪೂರ್ಣ ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಚಕ್ರಬಡ್ಡಿ ತೆಗೆದು ಒಟಿಸಿ

ಕೊಡಬೇಕು. ರೈತರನ್ನು ಉಳಿಸಲು ಋಣಮುಕ್ತರನ್ನಾಗಿ ಮಾಡಬೇಕಾಗಿದೆ. 


ಒಟಿಸಿ ಮುಖಾಂತರ ಸಾಲವನ್ನು ಕಟ್ಟಿಸಿಕೊಂಡು ರೈತರನ್ನು ಋಣಮುಕ್ತರನ್ನಾಗಿ

ಮಾಡಬೇಕು. ಎಸ್‌ಬಿಐ ಬ್ಯಾಂಕಿನಲ್ಲಿ ಶೇ.95% ರಷ್ಟು ರೈತರು ಋಣಮುಕ್ತರಾಗಿದ್ದಾರೆ. ಕೆನರಾ ಬ್ಯಾಂಕಿನಲ್ಲಿ

ಶೇ.40%ರಷ್ಟು ಋಣಮುಕ್ತರಾಗಿದ್ದಾರೆ. ಅದರಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಯಿಂದ ರೈತರಿಗೆ

ಋಣಮುಕ್ತರನ್ನಾಗಿ ಮಾಡುವಂತೆ ಕಿಸಾನ್ ಜಾಗೃತಿ ವಿಕಾಸ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಪಿ. ಯುಗೇಂಧರ್ ನಾಯ್ಡು ರವರು ಮನವಿ ಸಲ್ಲಿಸಿದರು.


ಈ ಸಂಧರ್ಭದಲ್ಲಿ ಕಿಸಾನ್ ಜಾಗೃತಿ ವಿಕಾಸ್ ಸಂಘದ ಸದಸ್ಯರು, ರೈತ ಮುಖಂಡರು ಉಪಸ್ಥಿತರಿದ್ದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ

ಕರೋನಾ ಹಿನ್ನೆಲೆ ರೈತರ ಆರ್ಥಿಕ ವ್ಯವಸ್ಥೆ ತಗ್ಗಿದೆ

ಬ್ಯಾಂಕ್ ನಲ್ಲಿ ಪಡೆದ ಸಾಲದಿಂದ ರೈತರ ಜೀವನ ಅಸ್ತವ್ಯಸ್ತ

ರೈತರು ಪಡೆದ ಸಾಲದಿಂದ ಋಣಮುಕ್ತರನ್ನಾಗಿ ಮಾಡಿKisan Jagruti TV Live Now | Watch Here 

Click Here


0 Response to "ಕಿಸಾನ್ ಜಾಗೃತಿ ವಿಕಾಸ್ ಸಂಘದಿಂದ ಕ.ಗ್ರಾ.ಬ್ಯಾಂಕ್ ಗೆ ಮನವಿ-Karnataka Gramin Bank-Protest-Kisan Jagruti Tv"

Post a Comment

Article Top Ads

Central Ads Article 1

Middle Ads Article 2

Article Bottom Ads