-->
ಹಾವಿನ ಕಡಿತವಾದಗ ಪ್ರಥಮ ಚಿಕಿತ್ಸಾ ವಿಧಾನ-ಏನನ್ನು ಮಾಡಬೇಕು:ಮಾಹಿತಿ-Kisan Jagruti TV

ಹಾವಿನ ಕಡಿತವಾದಗ ಪ್ರಥಮ ಚಿಕಿತ್ಸಾ ವಿಧಾನ-ಏನನ್ನು ಮಾಡಬೇಕು:ಮಾಹಿತಿ-Kisan Jagruti TV

 ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಈ ಭಯದ ಮುಖ್ಯ ಕಾರಣ ತಿಳುವಳಿಕೆ ಹಾಗೂ ಮಾಹಿತಿಯ ಕೊರತೆ. ಹಾಗಾಗಿ, ಅವನ್ನು ಹೋಗಲಾಡಿಸಲು Kisan Jagruti TVಯ ಇದೊಂದು ಸಣ್ಣ ಪ್ರಯತ್ನ. ಓದಿ ಹಾಗೂ ಇತರರಿಗೂ ತಿಳಿಸಿ..

ಹಾವುಗಳು ಆಹಾರ ಸರಪಣಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ಪರಿಸರವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತವೆ. ಇವು ಇಲಿಗಳ ಬೆಳೆಯುತ್ತಿರುವ ಸಂಖ್ಯೆಯನ್ನು ಕಡಿತಗೊಳಿಸಿ, ಬೆಲೆ ಬಾಳುವ ಕೃಷಿ ಉತ್ಪನ್ನಗಳನ್ನು ಉಳಿಸಲು ನೆರವಾಗುತ್ತವೆ. ಬುದ್ಧಿಜೀವಿ ಎನಿಸಿಕೊಂಡ ಮಾನವ, ಸಮತೋಲನದ ವಿರುದ್ಧವಾದ ನಡುವಳಿಕೆಯನ್ನು ತೋರುತ್ತಿರುವುದು ಒಂದು ಮಹಾದುರಂತ.


ಸಾಮಾನ್ಯವಾಗಿ ನಮ್ಮ ಮನೆಯ ಸುತ್ತ ಮುತ್ತ ಹಾವುಗಳು ಮುಖ್ಯ ಕಾರಣ ಇಲಿಗಳು. ತ್ಯಾಜ್ಯಗಳು ಇಲಿಗಳನ್ನು ಆಕರ್ಷಿಸುವುದರಿಂದ, ಹಾವುಗಳು ಇಲಿಗಳನ್ನರಸಿ ಬರುತ್ತವೆ. ಹಾಗಾಗಿ ತ್ಯಾಜ್ಯ ವಸ್ತುಗಳನ್ನು ಮನೆಯಿಂದ ನಿರ್ದಿಷ್ಟ ದೂರದಲ್ಲಿ ಎಸೆಯಿರಿ. ಮರ ಗಿಡಗಳ ಕೊಂಬೆಗಳು ಮನೆಯ ಮಹಡಿಗೆ ಅಥವಾ ಕಿಟಿಕಿಗೆ ತಾಗು ವಂತಿದ್ದರೆ ಅವುಗಳ ಮುಖೇನ ಹಾವುಗಳು ಮನೆಯೊಳಗೆ ಪ್ರವೇಶಿಸಬಹುದು, ಇದಕ್ಕೆ ಅವಕಾಶ ಕೊಡದಿರಿ.

ಭಾರತದ ಕೆಲವೇ ಹಾವುಗಳು ವಿಷಪೂರಿತವಾಗಿದ್ದು, ಬಹಳಷ್ಟು ಹಾವುಗಳು ನೀರೂಪದ್ರವಿಗಳಾಗಿವೆ. ವಿಷಪೂರಿತ ಹಾವಿಗಳಲ್ಲಿ 4 ಹಾವುಗಳು ಸಾಮಾನ್ಯವಾಗಿ ನಮ್ಮ ಸುತ್ತ ಕಾಣಸಿಗುತ್ತವೆ. ಅವು ಯಾವುದೆಂದರೆ, ನಾಗರ ಹಾವು, ಕಟ್ಟು ಹಾವು (ಕಡಂಬಳ ಹಾವು) , ಕೊಳಕು ಮಂಡಲ ಹಾಗೂ ರಕ್ತ ಮಂಡಲ (ಬುಕ್ರ್ಯಾ) ಹಾವು.


ಹಾವಿನ ಕಡಿತವಾದಗ ಪ್ರಥಮ ಚಿಕಿತ್ಸಾ ವಿಧಾನ-ಏನನ್ನು ಮಾಡಬೇಕು:


* ಕಡಿತಕ್ಕೊಳಗಾದ ಭಾಗವನ್ನು ಆದಷ್ಟು ಅಲುಗಾಡಿಸದಿರಿ.


* ಬಳೆ, ಕೈಗಡಿಯಾರ, ಗೆಜ್ಜೆ, ಉಂಗುರದಂತಹ ರಕ್ತ ಸಂಚಾರಕ್ಕೆ ಅಡ್ಡಿ ಪಡಿಸುವಂತವುಗಳನ್ನು ತೆಗೆಯಬೇಕು.


* ಕಡಿತಕ್ಕೊಳಗಾದ ಭಾಗಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ ಬ್ಯಾಂಡೇಜನ್ನು ಕಟ್ಟುವುದು (ತೀರಾ ಗಟ್ಟಿಯಾಗಿ ಬೇಡ)

ನೆನಪಿಡಿ: ಇಲ್ಲಿ ನಾವು ರಕ್ತ ಸಂಚಾರವನ್ನು ನಿಯಂತ್ರಿಸಬೇಕೆ ಹೊರತು, ಸ್ಥಗಿತ ಗೊಳಿಸಬಾರದು.


* ಆದಷ್ಟು ಬೇಗ ಆಸ್ಪತ್ರೆಗೆ ತೆರಳಿ.


* ಕಡಿತದ ನಂತರದ ಲಕ್ಷಣಗಳನ್ನು ವೈದ್ಯರಿಗೆ ತಿಳಿಸಿ. (ವಾಂತಿ ಬರುವಂತಾಗುವುದು, ರಕ್ತಸ್ರಾವ, ತಲೆನೋವು ಇತರ ಯಾವುದೇ ಲಕ್ಷಣಗಳು)


ಏನನ್ನು ಮಾಡಬಾರದು:


* ಕಡಿತಕ್ಕೊಳಗಾದ ವ್ಯಕ್ತಿಯನ್ನು ಹೆದರಿಸದಿರಿ. (ರಕ್ತದೊತ್ತಡ ಏರಿಕೆಗೆ ಕಾರಣವಾಗುತ್ತದೆ)


* ಕೋಳಿ ಪ್ರಯೋಗ, ಮಂಜುಗಡ್ಡೆ ಉಪಚಾರ ಮಾಡಬೇಡಿ.


* ಗಾಯದ ಗಾತ್ರ ಹಿಗ್ಗಿಸಿ, ಕಚ್ಚಿ ವಿಷ ಹೀರುವ ಪ್ರಯತ್ನ ಮಾಡಬೇಡಿ.


* ವಿಷದ ಪ್ರವಾಹವನ್ನು ಉತ್ತೇಜಿಸುವ ಯಾವುದೇ ಕ್ರಿಯೆ ಮಾಡಬಾರದು.


* ವಿನಾಕಾರಣ ಸಮಯ ವ್ಯರ್ಥ ಮಾಡದೇ ಆಸ್ಪತ್ರೆಗೆ ದೌಡಾಯಿಸಿ.

.

ಮನೆಯ ಒಳಗೆ/ಸುತ್ತಮುತ್ತ ಹಾವು ಕಂಡಾಗ...?


* ಹಾವಿನ ಚಲನವಲನದ ಮೇಲೆ ಗಮನವಿಡಿ.


* ತುಂಬಾ ಜನರು ಸೇರದಂತೆ ನೋಡಿಕೊಳ್ಳಬೇಕು. ಹಾವು ಹೆದರಿ ಅಲ್ಲೇ ಅವಿತು ಕೂರಬಹುದು.


* ಹಾವು ಹೊರಗೆ ಹೋಗಲು ಯತ್ನಿಸುತ್ತಿದ್ದರೆ, ಯಾವುದೇ ತೊಂದರೆ ಕೊಡದೆ ಅದನ್ನು ಹೊರ ಹೋಗಲು ಬಿಡಿ.


ನೆನಪಿಡಿ: ಹಾವು ನಮಗೆ ತೊಂದರೆ ಕೊಡಲು ನಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ತಮ್ಮ ಆಹಾರವನ್ನು ಹುಡುಕಿ ಬರುತ್ತವೆ. ಹಾಗೆಯೇ ಹೊರಟು ಹೋಗುತ್ತವೆ.


* ಅರಣ್ಯ ಇಲಾಖೆಗೆ, ಸಂಬಂಧ ಪಟ್ಟವರಿಗೆ ಹಾಗೂ ಸ್ಥಳೀಯ ಉರಗ ರಕ್ಷಕರಿಗೆ ವಿಷಯ ತಿಳಿಸಿ.

0 Response to "ಹಾವಿನ ಕಡಿತವಾದಗ ಪ್ರಥಮ ಚಿಕಿತ್ಸಾ ವಿಧಾನ-ಏನನ್ನು ಮಾಡಬೇಕು:ಮಾಹಿತಿ-Kisan Jagruti TV"

Post a Comment

Article Top Ads

Central Ads Article 1

Middle Ads Article 2

Article Bottom Ads