-->
 ಆಸ್ಪತ್ರೆಯಲ್ಲಿ ಇರುವ ಮೂಲ ಸಮಸ್ಯೆ ಬಗ್ಗೆ ಪರಿಶೀಲನೆ-Vijayapura-Kisan Jagruti Tv

ಆಸ್ಪತ್ರೆಯಲ್ಲಿ ಇರುವ ಮೂಲ ಸಮಸ್ಯೆ ಬಗ್ಗೆ ಪರಿಶೀಲನೆ-Vijayapura-Kisan Jagruti Tv


ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮ ಎಂದರೆ.ನೆನಪಿಗೆ ಬರುವುದು ತಡವಲಗಾದಲ್ಲಿ ಇರುವ ಮಾದರಿ ಸಮುದಾಯದ ಆರೋಗ್ಯ ಕೇಂದ್ರ.ಈ ಕೇಂದ್ರಕ್ಕೆ ಇಂದು ಇಂಡಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮದ್ದಿನ್ ಬೇಟಿ ನೀಡಿ ಆಸ್ಪತ್ರೆಯಲ್ಲಿ ಇರುವ ಮೂಲ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಿ ಸಮಸ್ಯೆಗಳನ್ನು ಅರಿತು ಈ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಹಾಗೂ ನೀರಿನ ಟ್ಯಾಂಕ್ ನಿರ್ಮಾಣ, ಆಸ್ಪತ್ರೆ ಸುತ್ತಲೂ ಚರಂಡಿ ನಿರ್ಮಾಣ ಸೇರಿದಂತೆ ಮೂಲಸೌಕರ್ಯವನ್ನು ಒದಗಿಸಲು ಸುಮಾರು 25 ಲಕ್ಷ ರೂಪಾಯಿಗಳ ವೆಚ್ಚದ  ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸರ್ಕಾರದಿಂದ ಅನುಮತಿ ಪಡೆದು ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿದರು. ನಂತರ ಮಾತನಾಡಿದ ತಡವಲಗಾ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ ಸಿ.ಆಯ್.ರಾಠೋಡ ಮಾತನಾಡಿ ತಡವಲಗಾ ಸಮುದಾಯದ ಆರೋಗ್ಯ ಕೇಂದ್ರ 30 ಹಾಸಿಗೆ ಆಸ್ಪತ್ರೆ ಯಾಗಿದ್ದು ಇಲ್ಲಿ ರಾತ್ರಿ ಸಹ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಾರೆ.ಹೀಗಾಗಿ ಜನರಿಗೆ ರಾತ್ರಿಯಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ  ಲಭಿಸುತ್ತದೆ.ಇಲ್ಲಿ ಚಿಕ್ಕಮಕ್ಕಳ ತಜ್ಞರು,ಸ್ತೀ ರೋಗ ತಜ್ಞರು, ಸೇರಿದಂತೆ ಆಯುರ್ವೇದಿಕ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರತಿ ತಿಂಗಳು 40 ರಿಂದ 50 ಸಹಜ ಹೆರಿಗೆಯಾದರೆ,10 ರಿಂದ 15 ಸಿಜೇರಿಯನ್ ಹೆರಿಗೆ ಯಾಗುತ್ತವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ  ಲ್ಯಾಂಡ್ ಆರ್ಮಿ A E E ಶೀ A N ಮುಲ್ಲಾ, ಲ್ಯಾಂಡ್ ಆರ್ಮಿ ಇಂಜಿನಿಯರ್ ರಾಜಶೇಖರ್ ಹೂಗಾರ, ತಡವಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ನಾಯಕ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಸ್ಮಾನ್ ಕಸ್ಸಾಬ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಗುಡ್ಲಮನಿ, ಆರೋಗ್ಯ ಇಲಾಖೆ ಅಧಿಕಾರಿ ಹಣಮಂತರಾಯಗೌಡ ಪಾಟೀಲ,ಗೀರಿಶ್ ಪಾಟೀಲ, ಅನೇಕರು ಉಪಸ್ಥಿತರಿದ್ದರು.

0 Response to " ಆಸ್ಪತ್ರೆಯಲ್ಲಿ ಇರುವ ಮೂಲ ಸಮಸ್ಯೆ ಬಗ್ಗೆ ಪರಿಶೀಲನೆ-Vijayapura-Kisan Jagruti Tv"

Post a Comment

Article Top Ads

Central Ads Article 1

Middle Ads Article 2

Article Bottom Ads